ಭಟ್ಕಳ: ಉತ್ತರ ಕನ್ನಡದ ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಅಳ್ವೆಕೋಡಿಯಲ್ಲಿ ಸಮುದ್ರ ಮತ್ತು ನದಿಯ ಸಂಗಮ ತೀರದಲ್ಲಿ ವಿರಾಜಮಾನಳಾಗಿರುವ, ಅತಿ ಪುರಾತನವಾದ ಜಾಗೃತ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಸನ್ನಿಧಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ನಾಳೆಯಿಂದ (ಜೂನ್ ೨೯ರಿಂದ) ಆರಂಭವಾಗಲಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಜೂನ್ ೨೯ರಿಂದ ಜುಲೈ ೭ರವರೆಗೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ನೂತನ ಯಜ್ಞ ಮಂಟಪ ಉದ್ಘಾಟನೆ, ಗೋಪುರಕ್ಕೆ ತಾಮ್ರದ ಹೊದಿಕೆ, ಶಿಖರ ಕಲಶ ಪ್ರತಿಷ್ಠೆ, ಶ್ರೀ ಶತಚಂಡಿಕಾ ಹವನ, ಶ್ರೀ ಸೂಕ್ತ ಹವನ, ಶ್ರೀ ಪಂಚದುರ್ಗ ಹವನ, ಶ್ರೀ ಲಕ್ಷ ಕುಂಕುಮಾರ್ಚನೆ, ಶ್ರೀ ದುರ್ಗಾನಮಸ್ಕಾರ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೊದಲ ದಿನದ ಕಾರ್ಯಕ್ರಮ :
ಸಂಜೆ ೫.೦೦ಕ್ಕೆ : ಶ್ರೀ ರಾಮ ಭಜನಾ ಮಂದಿರ ಸಣಬಾವಿಯಿಂದ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಹೊರಕಾಣಿಕೆ ತರುವುದು.
ಸಾಯಂಕಾಲ ೭.೦೦ಕ್ಕೆ : ಪರಮಪೂಜ್ಯ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳವರ ದಿವ್ಯ ಆಗಮನ, ಪೂರ್ಣಕುಂಭ ಸ್ವಾಗತ, ದೇವರ ದರ್ಶನ, ಗುರುಪಾದ್ಯ ಪೂಜೆ, ಆಶೀರ್ವಚನ, ರಾತ್ರಿ ರಾಕ್ಷೋಘ್ನ ಶಾಂತಿ.
ರಾತ್ರಿ ೮.೦೦ಕ್ಕೆ : ಮಹಾಮಂಗಳಾರತಿ, ಪ್ರಸಾದ ವಿತರಣೆ.
೯.೦೦ಕ್ಕೆ : ಝೇಂಕಾರ ಮೆಲೋಡಿಸ್ ಭಟ್ಕಳ ಇವರಿಂದ “ಭಕ್ತಿ ರಸಮಂಜರಿ ಕಾರ್ಯಕ್ರಮ”
ಪುಣ್ಯಕ್ಷೇತ್ರ ಅಳ್ವೆಕೋಡಿ :
ಅಳ್ವೆಕೋಡಿಯಲ್ಲಿ ದೇವಿಯ ಸನ್ನಿಧಾನದಲ್ಲಿ ಶರಣರಾದವರಿಗೆ ಅವಳು ರಕ್ಷಿಸುತ್ತಾಳೆ. ಹಿರಿಯರು ಮುಂದಿನದ್ದು ಯೋಚಿಸಿ ಅಂದೇ ದೊಡ್ಡ ದೊಡ್ಡ ಶಿಖರಕಳಸವನ್ನು ಅಳವಡಿಸಿದ್ದರು. ಇಲ್ಲಿ ಪ್ರತಿ ದಿವಸವೂ ಚಂಡಿಕಾಹವನ, ನಿತ್ಯ ನಿರಂತರ ಅನ್ನದಾನ ಸೇವೆ, ವೈದ್ಯಕೀಯ, ಶಿಕ್ಷಣ, ಧಾರ್ಮಿಕ ಉಚಿತ ಕಲ್ಯಾಣ ಮಂಟಪವನ್ನು ನಿರ್ಮಿಸಿ ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ. ಇದೊಂದು ಪುಣ್ಯ ಕ್ಷೇತ್ರವಾಗಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ವರ್ಧಂತಿ ಉತ್ಸವ ಸಂಪನ್ನ