ಕುಮಟಾ : ಇಲ್ಲಿನ ಕೆ.ವಿ.ಶೆಟ್ಟಿ & ಕಂಪನಿ ಕಚೇರಿ ಕಟ್ಟಡದಲ್ಲಿ ಇರುವ ಮಾನಸಾ ಕೋಚಿಂಗ್ ಸೆಂಟರ್ ವತಿಯಿಂದ ಏ.೪ರಿಂದ ಮೇ ೧೦ರವರೆಗೆ ೨ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಚದುರಂಗ ಹಾಗೂ ಚಿತ್ರಕಲಾ ತರಬೇತಿ ಆಯೋಜಿಸಲಾಗಿದೆ.
ಇದನ್ನೂ ಓದಿ : ಉತ್ತರ ಕನ್ನಡ ಸಹಿತ ಹಲವೆಡೆ ಮಳೆ ಸಾಧ್ಯತೆ
ಇದಲ್ಲದೆ ಉಚಿತ ಮೆದುಳಿಗೆ ಕಸರತ್ತು ಕಾರ್ಯಾಗಾರ ನಡೆಯಲಿದೆ. ಮೆದುಳಿಗೆ ಕಸರತ್ತು ನೀಡುವ ಹಲವಾರು ಸಲಕರಣೆಗಳ ಮೂಲಕ ಉಚಿತವಾಗಿ ಮೆದುಳಿನ ಕಸರತ್ತು ಮಾಡಿಸಲಾಗುವುದು. ಉತ್ತಮ ಸಂವಹನ ಹಾಗೂ ಭಾಷಣಕಲೆಯ ಕುರಿತು ಕೂಡ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಧ್ಯಾಹ್ನ 3 ರಿಂದ 6 ಗಂಟೆಯೊಳಗೆ ಬೇಟಿಯಾಗಿ ಅಥವಾ ಕರೆಮಾಡಿ (ಮೊ.೯೯೮೬೬೮೦೧೧೮ / ೯೬೩೨೭೫೪೫೦೧) ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ದೂರದ ಊರಿನ ವಿದ್ಯಾರ್ಥಿಗಳಿಗೆ ಆ್ಯಪ್ ಮೂಲಕ ತರಬೇತಿ ನೀಡಲಾಗುತ್ತದೆ. ಕೌಶಲ್ಯಪೂರ್ಣ ಆಟಗಾರರಿಗೆ ವ್ಯಕ್ತಿಗತ ಸ್ಪರ್ಧಾತ್ಮಕ ಚದುರಂಗ ತರಬೇತಿಯನ್ನು ಜೂನ್ನಿಂದ ಪ್ರಾರಂಭಿಸಲಾಗುವುದು. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಅಕೌಂಟೆನ್ಸಿ, ಎಕನಾಮಿಕ್ಸ್ ಮುಂತಾದ ಅಗತ್ಯ ವಿಷಯಗಳಿಗೆ ನೋಂದಾವಣೆ ಪ್ರಾರಂಭಗೊಂಡಿರುತ್ತದೆ. ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.