ಸೊರಬ : ವಿಜಯ ಕರ್ನಾಟಕ ವರದಿಗಾರ, ಕನ್ನಡ ಉಪನ್ಯಾಸಕ ಎಸ್.ಎಂ. ನೀಲೇಶ ಅವರು ಮಂಡಿಸಿದ ‘ಜಯಂತ ಕಾಯ್ಕಿಣಿಯವರ ಸಾಹಿತ್ಯದಲ್ಲಿ ಮಾನವೀಯ ಸಂಬಂಧಗಳು’ ಎಂಬ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪ್ರದಾನ ಮಾಡಿದೆ.
ಇದನ್ನೂ ಓದಿ : ೫ ಒಂಟೆ ರಕ್ಷಣೆ; ಇಬ್ಬರ ವಿರುದ್ಧ ದೂರು
ಇವರಿಗೆ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯ ಹಿರಿಯ ಪ್ರಾಧ್ಯಾಪಕರು, ಖ್ಯಾತ ಸಾಹಿತಿ, ವಾಗ್ಮಿಗಳಾದ ಡಾ. ಜಿ. ಪ್ರಶಾಂತ ನಾಯಕ ಅವರು ಮಾರ್ಗದರ್ಶನ ಮಾಡಿದ್ದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸೊರಬ ತಾಲೂಕಿನ ಶಾಂತಗೇರಿ ಗ್ರಾಮದ ಕೃಷಿ ಕುಟುಂಬದ ಸಣ್ಣಮ್ಮ ಮಂಜಪ್ಪ ದಂಪತಿಯ ಪುತ್ರ ಎಸ್.ಎಂ.ನೀಲೇಶ ಅವರು ಸ್ಥಳೀಯ ಸರಕಾರಿ ಶಾಲಾ-ಕಾಲೇಜುಗಳಲ್ಲಿಯೇ ಪ್ರಾಥಮಿಕ, ಕಾಲೇಜು ಶಿಕ್ಷಣ ಉನ್ನತ ಶ್ರೇಣಿಯಲ್ಲಿ ಪಡೆದಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ರ್ಯಾಂಕ್ ಮತ್ತು ೨ ಚಿನ್ನದ ಪದಕಗಳೊಂದಿಗೆ ಕನ್ನಡ ಎಂ.ಎ. ಮಾಡಿದ್ದಾರೆ. ದ್ವಿತೀಯ ರ್ಯಾಂಕ್ನೊಂದಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಉನ್ನತ ಶ್ರೇಣಿಯಲ್ಲಿ ಬಿ.ಇಡಿ ಪದವಿ ಪಡೆಯುವ ಜತೆಗೆ ಕೆ-ಸೆಟ್ ಪರೀಕ್ಷೆಯಲ್ಲೂ ಉತ್ತಿರ್ಣರಾಗಿದ್ದಾರೆ. ಕನ್ನಡ ಉಪನ್ಯಾಸಕ, ಪತ್ರಕರ್ತರಾಗಿ ಗುರುತಿಸಿಕೊಂಡು ಜನಮನ್ನಣೆ ಪಡೆದಿದ್ದಾರೆ.
ಹಾಗೆಯೇ, ತಾಲೂಕಿನಲ್ಲಿ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಕಲಾಸುರಭಿ ಸಾಂಸ್ಕೃತಿಕ ವೇದಿಕೆಯ ಕಾರ್ಯಾಧ್ಯಕ್ಷರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಉಪನ್ಯಾಸಗಳ ಜತೆಗೆ ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಹಲವು ಲೇಖನಗಳು ಪ್ರಕಟಗೊಂಡಿವೆ. ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸನ್ಮಾನ ಪಡೆದಿದ್ದಾರೆ.