ಹೊನ್ನಾವರ : ಎರಡು ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಿನ್ನೆ (ಜುಲೈ ೧೨) ಸಂಜೆ ತಾಲೂಕಿನ ಕರ್ಕಿಯ ದುಗ್ಗುರ ಕ್ರಾಸ್ ಬಳಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕರ್ಕಿ ಹೊರೆಸಾಲು ನಿವಾಸಿ ವಿಷ್ಣು ಕೃಷ್ಣ ಆಚಾರಿ(೬೦) ಮತ್ತು ಹೊಸಾಡ ರಂಗಿನಮಠದ ಪ್ರಿಯಾ ಅಂತೋನ ಲೋಪಿಸ್(೨೩) ಗಾಯಗೊಂಡವರು. ಗಾಯಾಳು ವಿಷ್ಣು ಆಚಾರಿ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸಿ.ಎ. ಪರೀಕ್ಷೆಯಲ್ಲಿ ಕಲ್ಪನಾ ಮಾಸ್ತಿ ಮೊಗೇರ ಉತ್ತೀರ್ಣ
ಆಗಿದ್ದೇನು?
ಶುಕ್ರವಾರ ಸಂಜೆ ಹೊನ್ನಾವರ ಕಡೆಯಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ವಿಷ್ಣು ಆಚಾರಿ ದುಗ್ಗುರ ಕ್ರಾಸ್ ಬಳಿ ಯಾವುದೇ ಮುನ್ಸೂಚನೆ ನೀಡದೆ ಒಮ್ಮೇಲೆ ಬಲಕ್ಕೆ ಬೈಕ್ ತಿರುಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮ ಎರಡು ಬೈಕುಗಳ ನಡುವೆ ಡಿಕ್ಕಿ ಸಂಭವಿಸಿದೆ. ವಿಷ್ಣು ಆಚಾರಿಯವರ ಬೈಕ್ ಕುಮಟಾ ಕಡೆಯಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿಯಾಗಿದೆ. ಕುಮಟಾ ತಾಲೂಕಿನ ಸಂತೆಗುಳಿ ದಿವಳ್ಳಿ ನಿವಾಸಿ ಪ್ರಿನ್ಸಲ್ ರೆಮೆಂಡಿಯೋ ಹೋರ್ಟಾ(೧೯) ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಹಿಂಬದಿ ಸವಾರರಾಗಿದ್ದ ಪ್ರಿಯಾ ಅವರ ತಲೆಗೆ ಹಾಗೂ ಬಲಗಣ್ಣಿನ ಹತ್ತಿರ ಗಾಯಗಳಾಗಿವೆ. ಅಲ್ಲದೆ ವಿಷ್ಣು ಆಚಾರಿಯವರ ಮೂಗಿನ ಹತ್ತಿರ, ಬಲಗಾಲಿನ ಮೊಣಗಂಟಿನ ಕೆಳಗೆ ಹಾಗೂ ಎಡಗಾಲಿನ ಪಾದಕ್ಕೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.