ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ-೧ರಲ್ಲಿ ಶೇ.೧೦೦ ಫಲಿತಾಂಶದೊಂದಿಗೆ ಏಳು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ರ‍್ಯಾಂಕ್ ಲಭಿಸಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪರೀಕ್ಷೆ ಬರೆದ ಒಟ್ಟೂ ೧೫೪ ವಿದ್ಯಾರ್ಥಿಗಳಲ್ಲಿ, ೧೦೫ ಡಿಸ್ಟಿಂಕ್ಷನ್ ಹಾಗೂ ೪೯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಕಾರ್ತಿಕ ರಾವುತ್ಕರ ೬೨೫ ಕ್ಕೆ ೬೨೧ (ಶೇ. ೯೯.೩೬) ಅಂಕ ಪಡೆದು ರಾಜ್ಯಕ್ಕೆ ೫ನೇ ಸ್ಥಾನ, ಭೂಮಿಕಾ ಸತೀಶ ನಾಯ್ಕ ೬೨೫ಕ್ಕೆ ೬೨೦ (ಶೇ. ೯೯.೨೦) ಅಂಕ ಪಡೆದು ರಾಜ್ಯಕ್ಕೆ ೬ನೇ ಸ್ಥಾನ, ಸುನಂದಾ ಶಾನಭಾಗ ಹಾಗೂ ವೈಷ್ಣವಿ ನಾಯ್ಕ ೬೨೫ಕ್ಕೆ ೬೧೯ (ಶೇ. ೯೯.೦೪) ಅಂಕಗಳೊಂದಿಗೆ ರಾಜ್ಯಕ್ಕೆ ೭ನೇ ಸ್ಥಾನ, ರೋಶನಿ ಆರ್. ೬೨೫ಕ್ಕೆ ೬೧೭ (ಶೇ. ೯೮.೭೨) ಅಂಕಗಳೊಂದಿಗೆ ರಾಜ್ಯಕ್ಕೆ ೯ನೇ ಸ್ಥಾನ, ವೈಷ್ಣವಿ ನಾಗೇಕರ ಹಾಗೂ ಕನ್ನಿಕಾ ಭಟ್ಟ ೬೨೫ ಕ್ಕೆ ೬೧೬ (ಶೇ. ೯೮.೫೬) ಅಂಕಗಳೊಂದಿಗೆ ರಾಜ್ಯಕ್ಕೆ ೧೦ನೇ ಸ್ಥಾನ ಪಡೆಯುವ ಮೂಲಕ ಏಳು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.
ಇದನ್ನೂ ಓದಿ : ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಶೇ. ೧೦೦ ಸಾಧನೆ
ಪ್ರಥಮ ಭಾಷೆಯಲ್ಲಿ ೩೭, ದ್ವಿತೀಯ ಭಾಷೆಯಲ್ಲಿ ೨೩, ತೃತೀಯ ಭಾಷೆಯಲ್ಲಿ ೪೭, ಗಣಿತದಲ್ಲಿ ೭, ವಿಜ್ಞಾನದಲ್ಲಿ ೧, ಸಮಾಜ ವಿಜ್ಞಾನದಲ್ಲಿ ೮ ಮಂದಿ ವಿದ್ಯಾರ್ಥಿಗಳು ಪೂರ್ಣಾಂಕದ ಸಾಧನೆ ಮಾಡಿದ್ದಾರೆ. ಅಂತೆಯೇ, ೪ ವಿದ್ಯಾರ್ಥಿಗಳು ಶೇ.೯೯ಕ್ಕಿಂತ ಅಧಿಕ, ೯ ವಿದ್ಯಾರ್ಥಿಗಳು ಶೇ.೯೮ಕ್ಕಿಂತ ಅಧಿಕ, ೩೪ ವಿದ್ಯಾರ್ಥಿಗಳು ಶೇ.೯೫ಕ್ಕಿಂತ ಅಧಿಕ, ೩೩ ವಿದ್ಯಾರ್ಥಿಗಳು ಶೇ.೯೦ಕ್ಕಿಂತ ಅಧಿಕ ಅಂಕಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಮುಖ್ಯೋಪಾಧ್ಯಾಯಿನಿ ಸುಮಾ ಪ್ರಭು, ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ, ಪಾಲಕವರ್ಗ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.