ಹೊನ್ನಾವರ : ತಾಲೂಕಿನ ಕಡತೋಕಾದಲ್ಲಿ ಯಕ್ಷಗಾನದ ದಂತಕಥೆ ಕಡತೋಕಾ ಮಂಜುನಾಥ ಭಾಗವತರ ನೆನಪಿನಲ್ಲಿ ಎರಡು ದಿನಗಳ ಯಕ್ಷೋತ್ಸವ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ : ಮುರುಡೇಶ್ವರ : ಭಕ್ತಸಾಗರದಲ್ಲಿ ಮಿಂದೆದ್ದ ಶಿವಭಕ್ತರು

ಮಾರ್ಚ್ ೧೬ರಂದು ಶನಿವಾರ ಮತ್ತು ೧೭ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕಾ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಈ ವಿಡಿಯೋ ನೋಡಿ : ಗೊಂಡರ ಡಕ್ಕೆ ಕುಣಿತ  https://fb.watch/qHF3pFMTXq/?mibextid=Nif5oz

ಮಾ.೧೬ರಂದು ಸಂಜೆ ೪ ಗಂಟೆಯಿಂದ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಬೆಳಗಾವಿ ಪ್ರಾದೇಶಿಕ ಆಯುಕ್ತ, ಹಟ್ಟಿ ಚಿನ್ನದ ಗಣಿ ಎಂ.ಡಿ. ಸಂಜಯ ಬಿ.ಶೆಟ್ಟಣ್ಣವರ್ ಅವರನ್ನು ಸನ್ಮಾನಿಸಲಾಗುತ್ತದೆ. ಶಾಸಕ ದಿನಕರ ಕೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಸುನಿಲ್ ನಾಯ್ಕ, ಶಿರಸಿಯ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಕುಮಟಾದ ಉದ್ಯಮಿ
ಮುರಳೀಧರ ಪ್ರಭು, ಬೆಂಗಳೂರಿನ ಉದ್ಯಮಿ ಎನ್.ಆರ್.ಹೆಗಡೆ ರಾಘೋಣ ಕರ್ಕಿ, ಶಿರಸಿಯ ನ್ಯಾಯವಾದಿ ಜಿ.ಎನ್.ಹೆಗಡೆ ಮುರೇಗಾರ್, ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್.ಶಂಭು ಭಟ್ ಕಡತೋಕ, ಉಡುಪಿಯ ಹವ್ಯಾಸಿ ಕಲಾವಿದ ರಘುನಾಥ ನಾಯಕ್, ಉಪಸ್ಥಿತರಿರುವರು. ಉಜಿರೆ ಅಶೋಕ ಭಟ್ ಅವರು ಕಡತೋಕರ ಕುರಿತು ಸಂಸ್ಕರಣ ನುಡಿ ಆಡಲಿದ್ದಾರೆ. ಹೊನ್ನಾವರದ ನ್ಯಾಯವಾದಿ ಸತೀಶ ಭಟ್ ಉಳಗೆರೆ ಸ್ವಾಗತಿಸುವರು. ಕಡತೋಕಾ ಕೃತಿ-ಸ್ಮೃತಿ ಪುರಸ್ಕೃತರಾಗಿಹಿರಿಯ ಮದ್ದಳೆಗಾರ ಮಂಜುನಾಥ ಭಂಡಾರಿ ಕಡತೋಕಾ, ಹಿರಿಯ ಯಕ್ಷಗಾನ ಕಲಾವಿದ ಗಣಪತಿ ನಾಯ್ಕ ಕುಮಟಾ ಆಗಮಿಸಲಿದ್ದಾರೆ.

ಸಂಜೆ ೫ ಗಂಟೆಯಿಂದ ಪಾಂಡೇಶ್ವರ ವೆಂಕಟ ವಿರಚಿತ ಕರ್ಣಪರ್ವ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ‌ ಹಿಮ್ಮೇಳದಲ್ಲಿ ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಗೋಪಾಲಕೃಷ್ಣ ಭಟ್ ಜೋಗಿಮನೆ, ಶ್ರೀಪಾದ ಭಟ್ ಕಡತೋಕಾ, ಗಣೇಶ ಯಾಜಿ ಇಡಗುಂಜಿ ಇರಲಿದ್ದಾರೆ. ಮದ್ದಳೆಯಲ್ಲಿ ಪಿ.ಕೆ.ಹೆಗಡೆ ಹರಿಕೇರಿ ಹಾಗೂ ಸುಬ್ರಹ್ಮಣ್ಯ ಭಟ್ ಬಾಡ, ಚಂಡೆಯಲ್ಲಿ ಮಯೂರ ಹೆಗಡೆ ಹರಿಕೇರಿ ಸಾಥ್ ನೀಡುವರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಡಾ.ಎಂ.ಪ್ರಭಾಕರ ಜೋಶಿ,ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ದಾರ್ ಹಾಗೂ ಪವನ ಕಿರಣಕೆರೆ ಭಾಗವಹಿಸಲಿದ್ದಾರೆ.


ಮಾರ್ಚ್ ೧೭ರಂದು ಬೆಳಿಗ್ಗೆ ೯.೩೦ರಿಂದ ೧.೩೦ರವರೆಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ‘ಅರ್ಥಾಂತರಂಗ’ದಿಂದ ಪ್ರೇರಿತ ಅರ್ಥಾಂತರಂಗ ಕಾರ್ಯಕ್ರಮವಿದೆ. ಅರ್ಥಗಾರಿಕೆಯ ಕುರಿತು ಚಿಂತನ ಮಂಥನ ಮತ್ತು ಪ್ರಾತ್ಯಕ್ಷಿಕೆ ಇರಲಿದ್ದು, ಡಾ.ಜಿ.ಎಲ್.ಹೆಗಡೆ ಉದ್ಘಾಟಿಸುವರು. ಅಧ್ಯಕ್ಷತೆ ಡಾ.ಎಂ.ಪ್ರಭಾಕರ ಜೋಶಿ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ರಾಧಾಕೃಷ್ಣ ಕಲ್ದಾರ್ ಹಾಗೂ ವಾಸುದೇವ ರಂಗಾಭಟ್ ಆಗಮಿಸುವರು. ಹವ್ಯಾಸಿ ಕಲಾವಿದ ಮತ್ತು ಅರ್ಥಧಾರಿ ಕಡತೋಕಾ ಗೋಪಾಲಕೃಷ್ಣ ಭಾಗವತ ನಿರ್ವಹಿಸುವರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೇಕ್ಷಕರಿಗೆ ಭೋಜನ ವ್ಯವಸ್ಥೆ ಇರಲಿದೆ.

ಮಧ್ಯಾಹ್ನ ೩ ಗಂಟೆಯಿಂದ ೫ ಗಂಟೆಯವರೆಗೆ ಸಾಗರದ ಕೆಳಮನೆಯ ಸಾಕೇತ ಕಲಾವಿದರು ಮತ್ತು ಅತಿಥಿ ಕಲಾವಿದರಿಂದ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ರಾಮನಿರ್ಯಾಣ ಯಕ್ಷಗಾನ ಪ್ರದರ್ಶನ ಇರಲಿದೆ.

ಸಂಜೆ ೫ ಗಂಟೆಯಿಂದ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ವಹಿಸುವರು. ಟಿ.ಎಂ.ಎಸ್.ಸಿದ್ದಾಪುರ ಅಧ್ಯಕ್ಷ, ನ್ಯಾಯವಾದಿ ಆರ್.ಎಂ.ಹೆಗಡೆ, ಹವ್ಯಕ ಮಹಾಮಂಡಳ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟ, ಕತಗಾಲದ ಸಾಮಾಜಿಕ ಮುಖಂಡ ವಿವೇಕ ಜಾಲಿಸತ್ಗಿ, ಮೂರೂರು ಕಲ್ಲದ್ದೆ ವಿದ್ಯಾನಿಕೇತನದ ಕಾರ್ಯಾಧ್ಯಕ್ಷ ಆರ್.ಜಿ.ಭಟ್ ಕಲ್ಲರೆಮನೆ, ಕಡ್ಲೆ ಪಂಚಾಯತ ಮಾಜಿ ಅಧ್ಯಕ್ಷ ಗೋವಿಂದ ಗೌಡ, ಆರ್.ಜಿ.ಪಿ.ಆರ್.ಎಸ್. ಜಿಲ್ಲಾ ಸಂಚಾಲಕ ವಿನೋದ ನಾಯ್ಕ, ಕುಮಟಾ ಕೂಜಳ್ಳಿಯ ವಿನಾಯಕ ಹೆಗಡೆ ಉಪಸ್ಥಿತರಿರುವರು. ಕಡತೋಕಾ ಕೃತಿ-ಸ್ಮೃತಿ ಪುರಸ್ಕೃತರಾಗಿ ಸಿದ್ದಾಪುರದ ಹಿರಿಯ ಹವ್ಯಾಸಿ ಭಾಗವತ ವಿರೂಪಾಕ್ಷ ಹೆಗಡೆ ಶೀಗೇಹಳ್ಳಿ, ಸಾಗರದ ಹೆಗ್ಗೋಡಿನ ಹಿರಿಯ ಭಾಗವತ ಕೆ.ಜಿ.ರಾಮರಾವ್ ಪುರಪ್ಪೆಮನೆ ಆಗಮಿಸಲಿದ್ದಾರೆ.

ಸಂಜೆ 6 ಗಂಟೆಯಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಪ್ರಸಂಗ ಭೀಷ್ಮ ವಿಜಯ ತಾಳಮದ್ದಳೆ ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಆಗಮಿಸುವರು. ಮದ್ದಳೆಯಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆಯಲ್ಲಿ ಗಜಾನನ ಹೆಗಡೆ ಸಾಂತೂರು, ವಾಸುದೇವ ರಂಗಾ ಭಟ್ ಹಾಗೂ ಪವನ ಕಿರಣಕೆರೆ ಸಾಥ್ ನೀಡುವರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಡಾ.ಎಂ.ಪ್ರಭಾಕರ ಜೋಶಿ ಮತ್ತು ರಾಧಾಕೃಷ್ಣ ಕಲ್ದಾರ್ ಭಾಗವಹಿಸುವರು.