ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ವೈವಿಧ್ಯ ಸಾಂಸ್ಕೃತಿಕ ಸಾಹಿತ್ಯಕ ಹಿರಿಮೆ ಸಾರುವಂತ ಅಪರೂಪದ ‘ಕನ್ನಡದ ಕಾಶ್ಮೀರ’ ಎಂಬ ಅಲ್ಬಮ್ ಗೀತೆಯೊಂದು ಸೋಮವಾರ ಬಿಡುಗಡೆಗೊಂಡಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಜಿಲ್ಲೆಯ ಭಾವ ಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿ ಅವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ ಇರುವ ಗೀತೆಯನ್ನು ಸ್ವತಃ ಸುಗಮ ಸಂಗೀತ ಗಾಯಕರಾಗಿರುವ ಉಮೇಶ ಮುಂಡಳ್ಳಿ ಹಾಡಿದ್ದಾರೆ.
ಇದನ್ನೂ ಓದಿ : ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ
ಸದಾ ಹೊಸತನ ಹಾಗೂ ವೈವಿಧ್ಯತೆ ಯನ್ನು ಹುಡುಕುವ ಕವಿ ಮುಂಡಳ್ಳಿ ಅವರು ತಮ್ಮ ಮಗಳು ನಿನಾದಳ ಹುಟ್ಡಿದ ಹಬ್ಬದಂದು ಮಗಳ ಕೈಯಿಂದಲೇ ಈ ವಿಶೇಷ ಗೀತೆಯನ್ನು ನಾಡಿನ ಜನತೆಗೆ ಅರ್ಪಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ : ಉ.ಕ. ಜಿಲ್ಲಾ ನಾಮಧಾರಿ ಪ್ರತಿಷ್ಠಾನ ಉದ್ಘಾಟನೆ
ನಿನಾದಳ ಹುಟ್ಟಿದ ಹಬ್ಬದ ಆಚರಣೆಯಲ್ಲಿ ತಮ್ಮ ಮನೆಯಲ್ಲಿಯೇ ಅತ್ಯಂತ ಸರಳವಾಗಿ ಗೀತೆಯನ್ನು ತಮ್ಮ “ನಿನಾದ ” Umesh Mundalli ಯೂಟ್ಯೂಬ್ ಚಾನೆಲ್ ನ ಮೂಲಕ ಬಿಡುಗಡೆ ಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಉಮೇಶ ಮುಂಡಳ್ಳಿ ಅವರ ಜೊತೆ ಅವರ ಪತ್ನಿ, ಲೇಖಕಿ ರೇಷ್ಮಾ ಉಮೇಶ, ಮಕ್ಕಳಾದ ನಿನಾದ ಉತ್ಥಾನ ಇದ್ದರು.
ಇದನ್ನೂ ಓದಿ : ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ೩ ಚಿನ್ನ, ೧ ಕಂಚು
ಈ ವಿಶೇಷ ಗೀತೆಗೆ ವಿನಾಯಕ ದೇವಾಡಿಗ ಕೊಳಲು ,ಆದಿತ್ಯ ದೇವಾಡಿಗ ತಬಲ ಹಾಗೂ ವಿಘ್ನೇಶ ಗೌಡ ಹೊನ್ನಾವರ ಇವರು ಕೀಬೋರ್ಡ್ ನಲ್ಲಿ ಸಹಕರಿಸಿದ್ದಾರೆ. ಜಿಲ್ಲೆಯ ಬಗ್ಗೆ ಅಭಿಮಾನ ಹೆಮ್ಮೆ ಪಡಬಹುದಾದಂತಹ ಈ ಗೀತೆಯನ್ನು ಎಲ್ಲರೂ ಕೇಳಿ ಮಾರ್ಗದರ್ಶನ ಹಾಗೂ ಆಶಿರ್ವಾದ ಮಾಡಿ ಎಂದು ಮುಂಡಳ್ಳಿ ಅವರು ಈ ಸಂದರ್ಭದಲ್ಲಿ ಕೇಳಿಕೊಂಡಿರುತ್ತಾರೆ.
ಹಾಡು ಕೇಳಲು ಲಿಂಕ್ ಒತ್ತಿ : ಕನ್ನಡದ ಕಾಶ್ಮೀರ ಆಲ್ಬಮ್ ಗೀತೆ