ಹೊನ್ನಾವರ: ತಾಲೂಕಿನ ಪ್ರಸಿದ್ದ ದೇವಿ ಕ್ಷೇತ್ರವಾದ ಶ್ರೀ ಕರಿಕಾನಮ್ಮ ಸನ್ನಿಧಿಯಲ್ಲಿ ಏ.22 ರ ಮಧ್ಯಾಹ್ನ 3 ಗಂಟೆಗೆ ‘ನಾದ ಸಮರ್ಪಣೆ’ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ : ೧೩ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ

ಹೊನ್ನಾವರದ ಶ್ರೀ ನಾದಭಾರತೀ ಸಂಗೀತ ಪಾಠಶಾಲೆ ವತಿಯಿಂದ ಶ್ರೀ ಕರಿಕಾನಮ್ಮ ದೇವಿ ಟ್ರಸ್ಟ್‌ ನೀಲಕೋಡ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ಆಮಂತ್ರಿತ ಕಲಾವಿದರಿಂದ ಗಾಯನ-ವಾದನ ಸೇವೆ ನಡೆಯಲಿದೆ. ವಿದ್ಯಾರ್ಥಿಗಳ ಗಾಯನಕ್ಕೆ ಭರತ ಹೆಗಡೆ ಕವಲಕ್ಕಿ, ವಿನಾಯಕ ಭಟ್ಟ ಹರಡಸೆ, ಅಕ್ಷಯ ಭಟ್ಟ, ಭವ ಭಟ್ಟ ತಬಲಾ ಹಾಗೂ ಮನೋಜ ಭಟ್ಟ ಕಡೇಹಳ್ಳ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬೆಂಗಳೂರಿನ ಪ್ರದ್ಯುಮ್ನ ಕರ್ಪೂರ ಇವರಿಂದ ತಬಲಾ ಸ್ವತಂತ್ರ ವಾದನ ನಡೆಯಲಿದೆ. ಖ್ಯಾತ ಗಾಯಕ ಡಾ.ಅಶೋಕ ಹುಗ್ಗಣ್ಣವರ ಹಾಗೂ ವಿಶ್ವೇಶ್ವರ ಭಟ್ಟ ಖರ್ವಾ ಇವರಿಂದ ಗಾಯನ ನಡೆಯಲಿದೆ. ಬೆಂಗಳೂರಿನ ಡಾ.ಉದಯರಾಜ ಕರ್ಪೂರ ಅವರು ತಬಲಾ ಸಾಥ್ ನೀಡುವರು. ವಿದ್ವಾನ್ ಗೌರೀಶ್ ಯಾಜಿ ಕೂಜಳ್ಳಿ ಮತ್ತು ಹರಿಶ್ಚಂದ್ರ ನಾಯ್ಕ ಇಡಗುಂಜಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

ಕರಿಕಾನಮ್ಮ ಸನ್ನಿಧಿಯಲ್ಲಿ ನಡೆಯುವ ಈ ನಾದ ಸಮರ್ಪಣೆ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ಕೋರಿದ್ದಾರೆ.