ಶಿರಸಿ : ೧೯೩೬ರಲ್ಲಿನ ಮುಸ್ಲಿಂ ಲೀಗ್ ಪ್ರಣಾಳಿಕೆ ಹಾಗೂ ೨೦೨೪ರ ಕಾಂಗ್ರೆಸ್ ಪ್ರಣಾಳಿಕೆಗೂ ವ್ಯತ್ಯಾಸವಿಲ್ಲ. ಕಾಂಗ್ರೆಸ್ ಪ್ರಣಾಳಿಕೆಯು ಪಾಕಿಸ್ತಾನದ ಪ್ರಣಾಳಿಕೆಯಂತೆ ಗೋಚರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.

ಇದನ್ನೂ ಓದಿ : ಟ್ಯಾಕ್ಸಿ ಪರ್ಮಿಟ್ ಶುಲ್ಕ ಹೆಚ್ಚಳಕ್ಕೆ ವಿರೋಧ

ಶಿರಸಿ ನಗರದ ದೀನದಯಾಳ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ದೇಶ ಒಡೆಯುವ, ದೇಶ ಹಾಳು ಮಾಡುವ, ರಾಜ್ಯದ ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಯಾರೂ ಕಿವಿ ಕೊಡಬಾರದು. ಯಾರೂ ನಂಬಬಾರದು ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಪ್ರಣಾಳಿಕೆ ಎಂದು ನ್ಯಾಯಪತ್ರ ಬಿಡುಗಡೆ ಪ್ರಹಸನದ ಮೂಲಕ ಕಾಂಗ್ರೆಸ್ ತಾನು ಕಳೆದ 60 ವರ್ಷಗಳ ಕಾಲ ಮಾಡಿದ ಅನ್ಯಾಯ ಮುಚ್ಚಿ ಹಾಕಲು ಮುಂದಾಗಿದೆ.
ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯು ಅದರ ಸೋಲಿನ ಇತಿಹಾಸ ಬಿಚ್ಚಿಟ್ಟಿವೆ. ೨೦೧೭ರ ನಂತರ ದೇಶದಲ್ಲಿ ಹಣದುಬ್ಬರ ಕಡಿಮೆಯಿತ್ತು. ಆದರೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಣದುಬ್ಬರ ಹೆಚ್ಚಿತ್ತು. ಕಾಂಗ್ರೆಸ್ ನ ೬೦ ವರ್ಷಗಳ ಅಧಿಕಾರಾವಧಿಯಲ್ಲಿ ದೇಶದ ಗ್ರೋಥ್ ರೇಟ್ ಶೇ.೧.೧೯ ಹಾಗೂ ೨೦೧೪ರಿಂದ ಈಚೆಗೆ ಬಿಜೆಪಿ ಅಧಿಕಾರಾವಧಿಯಲ್ಲಿ ಶೇ.೨೬ ದಾಖಲಾಗಿದೆ ಎಂದರು.

ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ನೀಡುವಂತಿರುವ ಕಾಂಗ್ರೆಸ್ ಪ್ರಣಾಳಿಕೆಯು ಕಾಂಗ್ರೆಸ್ ನ ರಾಹುಲ್ ಗಾಂಧಿ ನಕ್ಸಲ್ ನಾಯಕರಾಗುತ್ತಿದ್ದಾರೆಯೇ
ಎಂಬ ಅನುಮಾನ ಬರಲು ಕಾರಣವಾಗಿದೆ.‌ ಇದೇ ಕಾರಣದಿಂದ ದೇಶದಲ್ಲಿ ನಾವು ೪೦೦ಕ್ಕಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲುತ್ತೇವೆ. ಕರ್ನಾಟಕದಲ್ಲಿ ಹಿಂದೆ ೨೭ ಸ್ಥಾನಗಳನ್ನು ಹೊಂದಿದ್ದೇವು. ಈ ಬಾರಿ ೨೮ಕ್ಕೆ ೨೮ ಸ್ಥಾನ ಗೆಲ್ಲುತ್ತೇವೆ. ಕರ್ನಾಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗೋದು ಬಿಗ್ ಝೀರೋ. ಈ ಬಾರಿಯೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಪ್ರತಿಪಕ್ಷ ಸ್ಥಾನವೂ ಸಿಗುವುದಿಲ್ಲ ಎಂದು ಎಂದು ಲೇವಡಿ ಮಾಡಿದರು.

ಬಿಜೆಪಿ ಸರ್ಕಾರ ಈ ಹಿಂದೆ ಜನರ ಪರವಾಗಿ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ , ವಿವೇಕ ಶಾಲೆ ಅಭಿವೃದ್ಧಿ ಯೋಜನೆ, ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ, ಜಿಲ್ಲೆಗೊಂದು ಗೋ ಶಾಲೆ ಯೋಜನೆ, ಬಿಜೆಪಿ ತಂದ ಎಪಿಎಂಸಿ ಕಾಯ್ದೆ ರದ್ದುಗೊಳಿಸಲಾಗಿದೆ. ಕೃಷಿ ಭೂಮಿ ಮಾರಾಟ ಕಾಯ್ದೆ, ಮಹಿಳಾ ಸ್ತ್ತೀ ಸಾಮರ್ಥ್ಯ ಯೋಜನೆ , ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ಮಕ್ಕಳಿಗೆ ಉಚಿತ ಬಸ್ ಪಾಸ್ ಯೋಜನೆ ಕೈಬಿಡಲಾಗಿದೆ. ೩೬ ಸಾವಿರ ಕೋಟಿ ಎಸ್ಸಿ ಎಸ್ಟಿ ಅಭಿವೃದ್ಧಿ ಹಣವನ್ನೂ ಪೊಳ್ಳು ಗ್ಯಾರಂಟಿಗಾಗಿ ಖರ್ಚು ಮಾಡಲಾಗಿದೆ. ಕಾಂಗ್ರೆಸ್ಸಿನ ಎಲ್ಲಾ ತಿರ್ಮಾನ ಜನವಿರೋಧಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಕಾಂಗ್ರೆಸ್ ಸೇರಿದ ಶಿವರಾಮ ಹೆಬ್ಬಾರ ಪುತ್ರ ವಿವೇಕ

ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅತೃಪ್ತಿ ಇದೇ ಮೊದಲಲ್ಲ. ಅವರು ಬಿಜೆಪಿಗೆ ಬಂದಿದ್ದಿರಲಿ, ಹೋಗುತ್ತಿರುವುದಿರಲಿ ಮೊದಲಲ್ಲ. ಆದರೆ ಈ ಬಾರಿ ಪಕ್ಷಾಂತರ ಮಾಡಲು ಅವರು ಇಷ್ಟೊಂದು ಮೀನಮೇಷ ಮಾಡುತ್ತಿರುವುದೇಕೆ? ಎಂದು ಹರಿಪ್ರಕಾಶ ಕೋಣೆಮನೆ ಪ್ರಶ್ನಿಸಿದರು.

ಪಕ್ಷಕ್ಕೆ ನಾಯಕರಿಗಿಂತ ಕಾರ್ಯಕರ್ತರು ಮುಖ್ಯ. ಆದರೂ ಹೆಬ್ಬಾರ್ ಅವರಿಗೆ ವ್ಯಕ್ತಿಗತ ಗೌರವ ಕೊಡಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪದಾಧಿಕಾರಿಗಳ ಹುದ್ದೆಯಿಂದ ಇಳಿಸಿ ಹೊರಗಿಡುವ ಸ್ಥಿತಿ ಬಂತು. ಅದನ್ನು ಮಾಡಿದ್ದು ಬಿಜೆಪಿಗರ ಬಹುದೊಡ್ಡ ತಪ್ಪು. ಇನ್ನು ಮುಂದೆ ವ್ಯಕ್ತಿಗತವಾಗಿ ಗೌರವ ಕೊಡುವ ಬದಲು ಕಾರ್ಯಕರ್ತರಿಗೆ ಗೌರವ ಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಜಿಲ್ಲಾ ಖಜಾಂಚಿ ರಮಾಕಾಂತ ಭಟ್ ಇದ್ದರು.

ಏ.೧೨ರಂದು ನಾಮಪತ್ರ
ಏ.೧೨ ಶುಕ್ರವಾರದಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರವಾರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಗೋವಾ ಸಿಎಂ ಪ್ರಮೋದ ಸಾವಂತ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಸುನೀಲ್ ಕುಮಾರ್, ವಿಠ್ಠಲ ಹಲಗೇಕರ್, ದಿನಕರ ಶೆಟ್ಟಿ ಇನ್ನಿತರರು ಭಾಗವಹಿಸಲಿದ್ದಾರೆ.
ಸದಾನಂದ ಭಟ್, ಜಿಲ್ಲಾ ಬಿಜೆಪಿ ವಕ್ತಾರ.