ಬೆಳಗಾವಿ : ಕಾಡುಕೋಣ ತಿವಿದು ವೃದ್ದೆ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಖಾನಾಪುರ ತಾಲೂಕಿನ ಅಮಟೆ ಗ್ರಾಮದ ಹೊರವಲಯದ ಬಳಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ : ಆಧುನಿಕತೆ ಭರಾಟೆಯಲ್ಲೂ ಆಲೆಮನೆ ಇನ್ನೂ ಜೀವಂತ !

ಸರಸ್ವತಿ ಅರ್ಜುನ ಗಾವಡೆ (80) ಮೃತಪಟ್ಟವರು. ಅವರು ಮನೆಯಿಂದ ತಮ್ಮ ಹೊಲದ ಗೋಡಂಬಿ ಬೀಜಗಳನ್ನು ಕೀಳಲು ಹೋದಾಗ ಹಠಾತ್ ದಾಳಿ ನಡೆಸಿದ ಕಾಡುಕೋಣ ಅವರ ಹೊಟ್ಟೆಯ ಭಾಗಕ್ಕೆ ತಿವಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ವಿಷ ಸೇವಿಸಿ ರೈತ ಆತ್ಮಹತ್ಯೆ :
ಸಾಲಬಾಧೆ ತಾಳದೆ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಮೀಪದ ಆಲದಕಟ್ಟಿ ಕೆ.ಎಂ.ಗ್ರಾಮಲ್ಲಿ ನಡೆದಿದೆ. ಕುತ್ಸುದ್ದೀನ್ ಅಜೇಸಾಬ ನದಾಫ (42) ಮೃತ ರೈತ. ಇವರು ಕೃಷಿ ಚಟುವಟಿಕೆಗೆಂದು ಯರಗಟ್ಟಿ ಪಟ್ಟಣದ ಹಲವು ಖಾಸಗಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರು.
ಬೆಳೆ ನಷ್ಟವಾಗಿದ್ದರಿಂದ ವಿಷ ಕುಡಿದಿದ್ದರು. ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.