ಬೆಳಗಾವಿ : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಬೆಳಗಾವಿ ಮೇಯರ್ ಸವಿತಾ ಕಾಂಬಳೆ ಅವರು ಇಂದು ಸರಕಾರಿ ವಾಹನ ಬಿಟ್ಟು ಕಾಲ್ನಡಿಗೆಯಲ್ಲೇ ಮನೆಗೆ ಹೋಗಿರುವ ಚಿತ್ರ ಈಗ ವೈರಲ್ ಆಗಿದೆ.
ಇದನ್ನೂ ಓದಿ : ಬಂಡಾಯದ ಬಾವುಟ ಹಾರಿಸಿದ ಈಶ್ವರಪ್ಪ
ಇಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ. ಈ ಸಂದರ್ಭ ಮೇಯರ್ ಸವಿತಾ ಕಾಂಬಳೆ ಕಚೇರಿಯಲ್ಲಿದ್ದರು. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅವರು ಮಹಾನಗರ ಪಾಲಿಕೆಗೆ ಸೇರಿರುವ ಕಾರನ್ನು ಬಿಟ್ಟು ಮನೆಗೆ ಕಾಲ್ನಡಿಗೆಯಲ್ಲೇ ತೆರಳಿರುವುದು ಎಲ್ಲರ ಗಮನ ಸೆಳೆಯಿತು.
ವಿಡಿಯೋ ನೋಡಿ : ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ https://fb.watch/qRhASqlzP3/?mibextid=Nif5oz