ಅಂತರಾಷ್ಟ್ರೀಯ ದಕ್ಷಿಣ ಏಷ್ಯಾ ಹಿಪ್ ಹಾಪ್ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭೆ
ಶಿವಮೊಗ್ಗ : ಇದು ಕುಸ್ತಿ, ಕಬ್ಬಡ್ಡಿಯಲ್ಲ. ಕ್ರಿಕೆಟ್ ಅಂತೂ ಅಲ್ಲವೇ ಅಲ್ಲ. ಹಿಪ್ ಹಾಪ್ ನೃತ್ಯ ಸ್ಪರ್ಧೆಯಲ್ಲಿ ಕುಮಾರಿ ಧೃತಿ ದೇಶದ ಉತ್ತಮ ಪ್ರತಿಭೆಯಾಗಿ ಹೊರ ಹೊಮ್ಮತ್ತಿದ್ದಾಳೆ. ಶಿವಮೊಗ್ಗ ನಗರದ ಕೆಂಪಯ್ಯ ಮತ್ತು ಸೌಮ್ಯ ಎಸ್. ಆರ್. ದಂಪತಿಯ ಪುತ್ರಿಯಾಗಿರುವ ಧೃತಿ, ನಮ್ಮ ನಡುವಿನ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.
9 ವರ್ಷದ ಈಕೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತರ್ ರಾಷ್ಟ್ರೀಯ ದಕ್ಷಿಣ ಏಷ್ಯಾ ಹಿಪ್ ಹಾಪ್ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಭಾರತವನ್ನು ಪ್ರತಿನಿಧಿಸಿ, ಮಿನಿ ಮತ್ತು ಮೇಘ ಕ್ರೀಮ್ ಎರಡು ಸ್ಪರ್ಧೆಯಲ್ಲಿ ಭಾಗವಹಿಸಿ, ಬಂಗಾರದ ಪದಕವನ್ನು ಪಡೆದು ದೇಶಕ್ಕೆ, ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾಳೆ.
ಈ ಪ್ರತಿಭೆಯು ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದು, ಪಠ್ಯೇತರ ಚಟುವಟಿಕೆಯ ಜೊತೆಗೆ, ಓದಿನಲ್ಲಿಯೂ ಪ್ರತಿಬಾನ್ವಿತ ವಿದ್ಯಾರ್ಥಿನಿಯಾಗಿದ್ದಾಳೆ.
ಈ ಸಾಧನೆ ಪರಿಶ್ರಮದ ಹಿಂದೆ ಬೆನ್ನುತಟ್ಟಿದ ಪೋಷಕರು, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಪ್ರಸನ್ನನಾಥಸ್ವಾಮೀಜಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲೆ ಹೇಮಾ ಎಸ್. ಆರ್. ಹಾಗೂ ಅಧ್ಯಾಪಕ ವೃಂದದವರ ಸೂಕ್ತ ಮಾರ್ಗದರ್ಶನ ನನ್ನ ಬದುಕಿಗೆ ಹೊಸ ದಾರಿ ತೋರಿಸಿತು ಎನ್ನುತ್ತಾರೆ ಧೃತಿ.