ಶಿವಮೊಗ್ಗ : ಸಾಗರ ತಾಲೂಕಿನ ತಾಳಗುಪ್ಪ ಹೋಬಳಿ ಆಲಳ್ಳಿ ಸಮೀಪ ಕುಮಟಾ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಮಟಾ ವ್ಯಕ್ತಿ ಉಪೇಂದ್ರ (45) ಆತ್ಮಹತ್ಯೆಗೆ ಶರಣಾದವ. ಈತನ ಶವ ಆಲಳ್ಳಿ ಸಮೀಪ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದೆ. ಇವರ ಕುಟುಂಬ ಸಿದ್ದಾಪುರದಲ್ಲಿ ನೆಲೆಸಿದೆ ಎನ್ನಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯುಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಂಡಾಯದ ಬಾವುಟ ಹಾರಿಸಿದ ಈಶ್ವರಪ್ಪ
ಲಾರಿಗೆ ಸಿಲುಕಿ ಮಹಿಳೆ ಆತ್ಮಹತ್ಯೆ
ಭದ್ರಾವತಿ ನಗರದ ನ್ಯಾಯಾಲಯ ಮುಂಭಾಗದ ರಸ್ತೆಯಲ್ಲಿ ಮಹಿಳೆಯೊಬ್ಬರು ಸರಕು ತುಂಬಿದ ಲಾರಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಭದ್ರಾವತಿ ನಗರದ ಹೊಸಮನೆ ಬಡಾವಣೆ ನಿವಾಸಿ ವಿಜಯಲಕ್ಷ್ಮೀ (70) ಮೃತರು. ಕೆಲಸಕ್ಕಾಗಿ ತೆರಳುತ್ತಿದ್ಧಾಗ ಈ ದುರ್ಘಟನೆ ಸಂಭವಿಸಿದೆ.
ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ನೋಡಿ : ಈಶ್ವರಪ್ಪ ಗರಂ https://fb.watch/qQSeadEZw9/?mibextid=Nif5oz