ಬೆಳಗಾವಿ : ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಾಳ ಗ್ರಾಮದ ಕೃಷಿಕರೊಬ್ಬರ ಹೊಲದಲ್ಲಿರುವ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಂಸದ ಮಂಜುನಾಥ ಕುನ್ನೂರ ಸ್ಪರ್ಧೆ
ಕೃಷಿ ಹೊಂಡದ ನೀರು ತರಲು ಯುವಕರಿಬ್ಬರು ಹೋದ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಕನ್ನಾಳ ಗ್ರಾಮದ ಸಿದ್ದಲಿಂಗ ಸಿದ್ದರಾಮ ಹಿರೇ ಕುರುಬರ (19) ಮತ್ತು ಮುಧೋಳ ತಾಲೂಕಿನ ವೆಂಕಟಾಪುರ ಗ್ರಾಮದ ಆಕಾಶ ನಿಂಗಪ್ಪ ತುಂಗಳ(6) ಮೃತಪಟ್ಟವರು. ಇವರಿಬ್ಬರೂ ಕೃಷಿಹೊಂಡದಲ್ಲಿರುವ ನೀರನ್ನು ಕ್ಯಾನಿನಲ್ಲಿ ತುಂಬಿಕೊಳ್ಳುತ್ತಿರುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೈಜ – ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ