ಕುಮಟಾ : ಖಾಸಗಿ ಬಸ್ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಮಟಾದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣ ಸಮೀಪದ ನಿವಾಸಿ, ಕೂಲಿ ಕಾರ್ಮಿಕ ಸೂರಜ್ ಮಂಜುನಾಥ ಮಡಿವಾಳ (೨೨) ಮೃತ ದುರ್ದೈವಿ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಜೂನ್ ೨೯ರ ರಾತ್ರಿ ೯.೫೦ರ ಸುಮಾರಿಗೆ ಕುಮಟಾ ಕೊಪ್ಪಳಕರವಾಡಿ ಬ್ರೌನ್ ವುಡ್ ಶಾಫ್ ಹತ್ತಿರ ರಾ ಹೆ ೬೬ರಲ್ಲಿ ಅಪಘಾತ ಸಂಭವಿಸಿದೆ. ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ಸುಗಮ ಬಸ್ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಹೊಡೆದಿದೆ. ಒಮ್ಮೇಲೆ ಬಲಬದಿಗೆ ಹೋದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ : ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಚಾಲಕನ ಅತಿ ವೇಗ ಮತ್ತು ಅಜಾಗರೂಕತೆ ಚಾಲನೆಯಿಂದ ಅಪಘಾತ ಸಂಭವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಮಟಾ ತಾಲೂಕಿನ ವಕ್ಕನಳ್ಳಿಯ ನವೀನಗ ಗೋಪಾಲ ಗೌಡ ಕುಮಟಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು