ಭಟ್ಕಳ: ತಾಲೂಕಿನ ಗೊರಟೆ ಪ್ರೌಢಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ಪನಕಟ್ಟೆ ವಲಯದ ಆಶ್ರಯದಲ್ಲಿ ಜರುಗಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಸಂಪನ್ಮೂಲ ವ್ಯಕ್ತಿಯಾದ ಭಗವಾನ್ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಬಾಸ್ಕರ ನಾಯ್ಕ ಮಾತನಾಡಿ, ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ ತಾಯಿಗೆ, ಹೆಮ್ಮೆಯ ಗುರುಗಳಿಗೆ ಮೆಚ್ಚುವಂತಹ ವಿದ್ಯಾರ್ಥಿಗಳಾಗಬೇಕು. ಸಮಾಜಕ್ಕೆ ಆದರ್ಶವಾದ ಜೀವನ ಆಯ್ಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಇದನ್ನೂ ಓದಿ : ಓಮ್ನಿ – ಟೂರಿಸ್ಟ್ ಬಸ್ ನಡುವೆ ಡಿಕ್ಕಿ; ಭಟ್ಕಳದ ವ್ಯಕ್ತಿ ಸಾವು

ಉದ್ಘಾಟನೆಯನ್ನು ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಘವೇಂದ್ರ, ಎಮ್. ನಾಯ್ಕ ನೆರವೇರಿಸಿದರು. ವಲಯ ಮೇಲ್ವಿಚಾರಕ ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದುರ್ಗಾದಾಸ ಸ್ವಾಗತಿಸಿದರು. ಸೇವಾಪ್ರತಿನಿಧಿ ಸನ್ನು ಎಸ್ ಗೊಂಡ ವಂದಿಸಿದರು. ಗೊರಟೆ ಪ್ರೌಢಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.