ಸೊರಬ : ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ಜಾತ್ರೆ ಮಹೋತ್ಸವ ಮಾ.೧೫ ರಿಂದ ಆರಂಭವಾಗಲಿದೆ.

ಇದನ್ನೂ ಓದಿ : ಬಂಗಾರಪ್ಪ ಕುಟುಂಬ ಒಂದಾಗಿಸಲು ನಾನ್ಯಾರು? : ನಟ ಶಿವರಾಜಕುಮಾರ ಪ್ರಶ್ನೆ

ಈ ಹಿನ್ನೆಲೆಯಲ್ಲಿ ಪರಿವಾರ ದೇವರುಗಳನ್ನು ಕರೆ ಮಾಡುವ ಪದ್ಧತಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ದೇವಾಲಯದ ಗುಡ್ಡದ ಮೇಲಿರುವ ಪರಿವಾರ ದೇವರಾದ ಶ್ರೀ ಕೋಟೆ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಸಂಪ್ರದಾಯದಂತೆ ಜಾತ್ರೆಗೆ ಕರೆ ನೀಡುವ ಪದ್ಧತಿ ನಡೆಯಿತು. ನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಚಂದ್ರಗುತ್ತಿ ಗ್ರಾಮದ ಮಂಗಳಾರತಿ ಕಟ್ಟೆ, ಹರೀಶಿ ರಸ್ತೆ, ಮುಖ್ಯ ರಸ್ತೆ ಮಾರ್ಗವಾಗಿ ಶ್ರೀ ದೇವಿಯ ದೇಗುಲದವರೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಅರ್ಚಕರಾದ ಅರವಿಂದ್ ಭಟ್ ಪೂಜಾ ಕೈಂಕರ್ಯಗಳ ನೇತೃತ್ವ  ವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವದ ಹಿನ್ನೆಲೆ ಧಾರ್ಮಿಕ ಕಾರ್ಯಗಳು ಚಾಲನೆಗೊಂಡಿವೆ . ಶ್ರೀ ದೇವಿಯ ಪರಿವಾರ ದೇವರುಗಳಿಗೆ ಜಾತ್ರೆಗೆ ಕರೆ ನೀಡುವ ಪದ್ಧತಿಗಳನ್ನು ನಡೆಸಲಾಗುತ್ತಿದೆ. ಗುರುವಾರ ಪರಿವಾರ ದೇವರಾದ ಶ್ರೀ ಬನಶಂಕರಿ ದೇವಾಲಯಕ್ಕೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ತೆರಳಲಿದೆ.
–  ವಿ.ಎಲ್. ಶಿವಪ್ರಸಾದ್, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ

ಈ ವಿಡಿಯೋ ನೋಡಿ : ಮಕ್ಕಳಿಂದ ಪಾಲಕರ ಪಾದಪೂಜೆ  https://fb.watch/qNuP3PRw6L/?mibextid=Nif5oz