ಮಂಗಳೂರು : ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ 25ರ ಹರೆಯದ ಯುವಕ ಅನಿಲ್ ಜಾನ್ ಸಿಕ್ವೆರಾ 2023ರ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಪಾಸ್ ಮಾಡಿದ್ದು, ಆ ಮೂಲಕ ರಾಜ್ಯದಲ್ಲಿ ಜಡ್ಜ್ ಹುದ್ದೆ ಏರಿದ ಅತಿ ಕಿರಿಯ ವ್ಯಕ್ತಿ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ : ಭಾರತ್ ಅಕ್ಕಿ ಬ್ಯಾಗ್ ಖರೀದಿಗೆ ಉದ್ಧದ ಸಾಲು
ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್ಎಲ್ ಬಿ ಪೂರೈಸಿದ್ದ ಅನಿಲ್ ಜಾನ್ ಸಿಕ್ವೆರಾ ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಬಂಟ್ವಾಳದ ಬೊರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು.
ನೇರ ಪ್ರಸಾರ ವೀಕ್ಷಿಸಿ : ಶಿವಮೊಗ್ಗ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಸಮಾವೇಶ-ಡಿಕೆಶಿ ಭಾಗಿ https://fb.watch/qpi-4ZyRC1/?mibextid=Nif5oz
ಕಾನೂನು ಪದವಿಯ ಬಳಿಕ ಮಂಗಳೂರಿನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರಾಗಿ ಪ್ರಾಕ್ಟಿಸ್ ಆರಂಭಿಸಿದ್ದರು. ಮಂಗಳೂರಿನ ವಕೀಲರಾದ ದೀಪಕ್ ಡಿಸೋಜ ಮತ್ತು ನವೀನ್ ಪಾಯಸ್ ಜೊತೆಗೆ ವೃತ್ತಿ ನಡೆಸುತ್ತಿದ್ದರು. ಕಾಲೇಜು ದಿನಗಳಲ್ಲೇ ನಾಯಕತ್ವ ಬೆಳೆಸಿಕೊಂಡಿದ್ದ అనిಲ್ ಸಿಕ್ಕೇರಾ 2022 ರಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಇಂಡಿಯನ್ ಕೆಥೋಲಿಕ್ ಯೂತ್ ಮೂಮೆಂಟ್ ಸಂಘಟನೆಯ ಅಧ್ಯಕ್ಷರಾಗಿದ್ದರು. ಅನಿಲ್ ಸಿಕ್ವೆರಾ ಅವರು ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎರಡೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಪ್ರಿಲಿಮಿನರಿ, ಮೈನ್ಸ್ ಮತ್ತು ಇಂಟರ್ವ್ಯೂ ಪಾಸ್ ಮಾಡುವ ಮೂಲಕ ಜಡ್ಜ್ ಹುದ್ದೆ ಪಡೆದು ಇತರರಿಗೆ ಸ್ಪೂರ್ತಿಯಾಗಿದ್ದಾರೆ.