ಭಟ್ಕಳ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ಭಟ್ಕಳ ತಾಲೂಕಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ತೇರ್ಗಡೆಗೊಂಡ ಜಿ.ಎಸ್.ಬಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ರೀ ಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ಜರುಗಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

 

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಭಟ್ಕಳದ ವೈಟಲ್ ಅಲೈನ್ ವೈದ್ಯೆ ಡಾ. ಧನ್ಯಾ ಪ್ರಭು,

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಟ್ಕಳದ ವೈಟಲ್ ಅಲೈನ್ ವೈದ್ಯೆ ಡಾ. ಧನ್ಯಾ ಪ್ರಭು ಮಾತನಾಡಿದರು.

ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪುರಸ್ಕರಿಸಿದರು. ಜಿ.ಎಸ್.ಎಸ್ ಸಮಿತಿಯು ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹೊಂದಿರುವ ಕಾಳಜಿಯನ್ನು ಪ್ರಶಂಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಏಳ್ಗೆಗೆ ಪಾಲಕರ ಶ್ರಮ ಹಾಗೂ ಲಭ್ಯವಿರುವ ಪ್ರಚಲಿತ ಶೈಕ್ಷಣಿಕ ಕೋರ್ಸುಗಳ ಬಗ್ಗೆ, ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿನ ವಿಪುಲ ಅವಕಾಶಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.

ಇದನ್ನೂ ಓದಿ : ಪುಸ್ತಕ ವಿತರಣಾ ಸಮಾರಂಭಕ್ಕೆ ಚಾಲನೆ

ಮಹಿಳಾ ಸಮಿತಿಯ ಉಪಾಧ್ಯಕ್ಷೆ ರಜನಿ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನಬೆಳೆಸಿ ಕೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ : ಚಲಿಸುತ್ತಿದ್ದ ಬೈಕಿಗೆ ಕಾರೊಂದು ಡಿಕ್ಕಿಯಾಗಿ ಸವಾರ ಸಾವು

ಗೌರವಾಧ್ಯಕ್ಷ ನರೇಂದ್ರ ನಾಯಕ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಕೊಂಡಾಡುತ್ತಾ, ದಾನಿಗಳ ಹಾಗೂ ಸಮಾಜ ಬಾಂಧವರ ಸಹಕಾರದಿಂದ ವರ್ಷಂಪ್ರತಿ ನೀಡಲಾಗುವ ಜಿ.ಎಸ್.ಬಿ. ಸ್ಕಾಲರಶಿಪ್‌ಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಸರ್ವತೋಮುಖ ಏಳ್ಗೆಗೆ ತನು-ಮನ-ಧನ ಸಹಕಾರಕ್ಕೆ ಸಮಾಜವು ಸದಾ ಸಿದ್ಧ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿ.ಎಸ್.ಎಸ್. ಅಧ್ಯಕ್ಷ ಕಲ್ಪೇಶ ಪೈ, ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಿಕ್ಷಣ ಕ್ಷೇತ್ರಕ್ಕೆ ದಾನಿಗಳ ಕೊಡುಗೆಯ ಕುರಿತು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿ.ಎಸ್.ಬಿ. ಸಮಾಜ ಬಾಂಧವರು.

ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ರಾಮು ಕಾಮತ, ಬಾಬಾನಂದ ಪೈ, ಪ್ರಸನ್ನ ಪ್ರಭು, ಸಮಿತಿಯ ಸದಸ್ಯರಾದ ಅನೀಲ ಪೈ, ದೀಪಕ ನಾಯಕ, ವಿವೇಕ ಮಹಾಲೆ, ಪ್ರವೀಣ ನಾಯಕ, ಕೃಷ್ಣಾನಂದ ಪ್ರಭು ಸಹಿತ ಪಾಲಕ-ಪೋಷಕರು ಉಪಸ್ಥಿತರಿದ್ದರು. ಸಹಕಾರ್ಯದರ್ಶಿ ಗುರುದಾಸ ಪ್ರಭು ನಿರೂಪಿಸಿದರು, ಕಾರ್ಯದರ್ಶಿ ಶ್ರೀನಾಥ ಪೈ ವಂದನಾರ್ಪಣೆಗೈದರು.