ಭಟ್ಕಳ: ಉತ್ತರ ಕನ್ನಡದ ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಅಳ್ವೆಕೋಡಿ ಸಮುದ್ರ ಮತ್ತು ನದಿಯ ಸಂಗಮ ತೀರದಲ್ಲಿ ವಿರಾಜಮಾನಳಾಗಿರುವ, ಅತಿ ಪುರಾತನವಾದ ಜಾಗೃತ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಸನ್ನಿಧಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಜೂನ್ ೨೯ರಿಂದ ಆರಂಭವಾಗಲಿದೆ ಎಂದು ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಮನೆ ಹೇಳಿದರು.

ಇದನ್ನೂ ಓದಿ : ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ವರ್ಧಂತಿ ಉತ್ಸವ ಸಂಪನ್ನ

ಅವರು ಶುಕ್ರವಾರ ಅಳ್ವೆಕೋಡಿ ಸಾರ್ವಜನಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಜೂನ್ ೨೯ರಿಂದ ಜುಲೈ ೭ರವರೆಗೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ನೂತನ ಯಜ್ಞ ಮಂಟಪ ಉದ್ಘಾಟನೆ, ಗೋಪುರಕ್ಕೆ ತಾಮ್ರದ ಹೊದಿಕೆ, ಶಿಖರ ಕಲಶ ಪ್ರತಿಷ್ಠೆ, ಶ್ರೀ ಶತಚಂಡಿಕಾ ಹವನ, ಶ್ರೀ ಸೂಕ್ತ ಹವನ, ಶ್ರೀ ಪಂಚದುರ್ಗ ಹವನ, ಶ್ರೀ ಲಕ್ಷ ಕುಂಕುಮಾರ್ಚನೆ, ಶ್ರೀ ದುರ್ಗಾನಮಸ್ಕಾರ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ದೇವಸ್ಥಾನದ ಅರ್ಚಕ ಮುಕುಂದ ಪುರಾಣಿಕ ಮಾತನಾಡಿ, ದೇವಿಯ ಸನ್ನಿಧಾನದಲ್ಲಿ ಶರಣರಾದವರಿಗೆ ಅವಳು ರಕ್ಷಿಸುತ್ತಾಳೆ. ಹಿರಿಯರು ಮುಂದಿನದ್ದು ಯೋಚಿಸಿ ಅಂದೇ ದೊಡ್ಡ ದೊಡ್ಡ ಶಿಖರಕಳಸವನ್ನು ಅಳವಡಿಸಿದ್ದರು. ಇಲ್ಲಿ ಪ್ರತಿ ದಿವಸವೂ ಚಂಡಿಕಾಹವನ, ನಿತ್ಯ ನಿರಂತರ ಅನ್ನದಾನ ಸೇವೆ, ವೈದ್ಯಕೀಯ, ಶಿಕ್ಷಣ, ಧಾರ್ಮಿಕ ಉಚಿತ ಕಲ್ಯಾಣ ಮಂಟಪವನ್ನು ನಿರ್ಮಿಸಿ ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ. ಇದೊಂದು ಪುಣ್ಯ ಕ್ಷೇತ್ರವಾಗಿ ನಿರ್ಮಾಣವಾಗಿದೆ ಎಂದರು.


ಮಾರಿಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಪ್ರತಿದಿನ ನಡೆಯುವ ಸಾಂಸ್ಕೃತಿಕ, ಮನೋರಂಜನೆ, ಭಕ್ತಿ ಲಹರಿ, ಯಕ್ಷಗಾನ, ನಾಟಕ, ಸಂಗೀತ ಸುಧೆ ಕಾರ್ಯಕ್ರಮದ ವಿವರ ನೀಡಿದರು. ಕಾರ್ಯದರ್ಶಿ ನಾರಾಯಣ ದೈಮನೆ ಪುರಾತನ ದೇವಸ್ಥಾನದ ಇತಿಹಾಸದ ಕುರಿತು ತಿಳಿಸಿದರು.


ಈ ಸಂದರ್ಭದಲ್ಲಿ ದೇವಪ್ಪ ಮೊಗೇರ, ಹನುಮಂತ ನಾಯ್ಕ, ರಾಜು ಮೊಗೇರ, ಮಂಜುನಾಥ ಕೋಡಿಹಿತ್ತಲ, ಇತರರು ಇದ್ದರು.