ಕುಮಟಾ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಟಾಪ್ ೧೦ರ ಪಟ್ಟಿಯಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ಹತ್ತನೇ ತರಗತಿಯ ೧೨ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಉತ್ತರಪತ್ರಿಕೆಯ ಮರುಮೌಲ್ಯಮಾಪನದಲ್ಲಿ ಏಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪ್ರಾಪ್ತವಾಗಿದೆ. ಇದರಿಂದಾಗಿ ಸಂಸ್ಥೆಗೆ ಮರುಮೌಲ್ಯಮಾಪನಕ್ಕೂ ಪೂರ್ವದ ಏಳು ರ‍್ಯಾಂಕುಗಳ ಜೊತೆಗೆ, ಇದೀಗ ರಾಜ್ಯಮಟ್ಟದಲ್ಲಿ ಇನ್ನೂ ಐದು ರ‍್ಯಾಂಕುಗಳು ಲಭ್ಯವಾಗುವ ಮೂಲಕ ರಾಜ್ಯಮಟ್ಟದ ಟಾಪ್ ೧೦ರ ಪಟ್ಟಿಯಲ್ಲಿ ೧೨ ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಜೂನ್‌ ೮ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ವೈಷ್ಣವಿ ರಮೇಶ ನಾಯ್ಕ ಗಣಿತದಲ್ಲಿ ೧ ಅಂಕ ಹೆಚ್ಚಳವಾಗಿ ೬೨೫ ಕ್ಕೆ ೬೨೧ ( ೯೯.೩೬%) ಅಂಕ ಪಡೆದು ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್ ಪಡೆದಿದ್ದಾಳೆ. ಭೌಮಿಕ ಹಬ್ಬು ಇಂಗ್ಲೀಷ್ ನಲ್ಲಿ ೯ ಅಂಕದ ಹೆಚ್ಚಳದೊಂದಿಗೆ ೬೨೧ ( ೯೯.೩೬%) ಅಂಕಗಳೊಂದಿಗೆ ರಾಜ್ಯಕ್ಕೆ ೫ನೇ ರ‍್ಯಾಂಕನ್ನು, ವೈಷ್ಣವಿ ಶಂಕರ ನಾಗೇಕರ ಇಂಗ್ಲೀಷ್ ನಲ್ಲಿ ೧, ಸಮಾಜ ವಿಜ್ಞಾನದಲ್ಲಿ ೧ ಅಂಕ ಹೆಚ್ಚಳದೊಂದಿಗೆ ೬೧೮ (೯೮.೮೮%) ಪಡೆದು ೮ನೇ ರ‍್ಯಾಂಕನ್ನು, ನಂದಿನಿ ನಾರಾಯಣ ನಾಯಕ ವಿಜ್ಞಾನ ವಿಷಯದಲ್ಲಿ ೨, ಇಂಗ್ಲಿಷ್ ನಲ್ಲಿ ೧ ಅಂಕ ಹೆಚ್ಚಳದೊಂದಿಗೆ ೬೧೮ (೯೮.೮೮%) ಅಂಕ ಪಡೆದು ಎಂಟನೇ ಸ್ಥಾನ, ತ್ರಿಷಾ ಪ್ರಮೋದ ನಾಯ್ಕ ಕನ್ನಡದಲ್ಲಿ ೨ ಅಂಕದ ಹೆಚ್ಚಳದೊಂದಿಗೆ ೬೧೭(೯೮.೭೨%) ಅಂಕಗಳೊಂದಿಗೆ ೯ನೇ ರ‍್ಯಾಂಕನ್ನು, ಮೇಘನಾ ಚಂದ್ರಶೇಖರ ನಾಯ್ಕ ವಿಜ್ಞಾನ ವಿಷಯದಲ್ಲಿ ೨ ಅಂಕ ಹೆಚ್ಚಳದೊಂದಿಗೆ ೬೧೭(೯೮.೭೨%) ಅಂಕದೊಂದಿಗೆ ೯ನೇ ರ‍್ಯಾಂಕನ್ನು ಗಳಿಸಿಕೊಂಡಿದ್ದಾರೆ. ದೀಪ್ತಿ ದೇವಾನಂದ ನಾಯಕ ಇಂಗ್ಲಿಷ್ ೩ ಹಾಗೂ ವಿಜ್ಞಾನದಲ್ಲಿ ೧ ಅಂಕ ಹೆಚ್ಚಳದೊಂದಿಗೆ ೬೧೬(೯೮.೫೬%) ಅಂಕಗಳೊಂದಿಗೆ ರಾಜ್ಯಮಟ್ಟದ ೧೦ ನೇ ರ‍್ಯಾಂಕ್ ಪಡೆದಿದ್ದಾಳೆ.
ಈ ಮೂಲಕ ಒಟ್ಟೂ ೧೨ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆದಂತಾಗಿದೆ. ೩೫ ವಿದ್ಯಾರ್ಥಿಗಳು ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ನಾಗರಾಜ ಬಿ. ಪಟಗಾರ ನೂತನ ಅಧ್ಯಕ್ಷರಾಗಿ ಆಯ್ಕೆ