ಭಟ್ಕಳ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನ ಭೀಮಾನದಿಯ ಕಡವಿನಕಟ್ಟೆ ಜಲಾಶಯ ತುಂಬಿ ತುಳುಕುತ್ತಿದೆ. ಜಲಾಶದಿಂದ ಧುಮ್ಮಿಕ್ಕಿ ನೀರು ಹರಿಯುವ ನಯನ ಮನೋಹರ ದೃಶ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಜಲಲ ಜಲಧಾರೆ : ಫೇಸ್‌ಬುಕ್‌ ರೀಲ್ / ಇನ್ಸ್ಟಾಗ್ರಾಂನಲ್ಲಿ ರೀಲ್

ಕಳೆದ ಒಂದು ವಾರದಿಂದ ಎಗ್ಗಿಲ್ಲದೆ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಕಡವಿನಕಟ್ಟೆ ಡ್ಯಾಂ ಸಂಪೂರ್ಣ ತುಂಬಿ ತುಳುಕುತ್ತಿದೆ. ಸ್ಥಳೀಯರನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುವುದರೊಂದಿಗೆ ಹಾಲ್ನೊರೆಯಂತಹ ನೀರು ಎಲ್ಲರ ಮನಸೊರೆಗೊಳಿತ್ತಿದೆ.

ಇದನ್ನೂ ಓದಿ : ನಾರಾಯಣ ಗುರು ವಸತಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಭಟ್ಕಳದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಎಲ್ಲಾ ಹೊಳೆ, ಕೊಳ್ಳ, ನದಿಗಳು ತುಂಬಿವೆ. ಭೀಮಾ ನದಿಯಿಂದ ಆವರಿಸಿಕೊಂಡಿರುವ ಇಲ್ಲಿನ ಕಡವಿನಕಟ್ಟೆ ಡ್ಯಾಂ ಸಹ ತುಂಬಿದೆ. ಈ ಮನಮೋಹಕ ತಾಣದ ದೃಶ್ಯ ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಇದನ್ನೂ ಓದಿ : ದೇವಸ್ಥಾನದಲ್ಲಿ ದೈವತ್ವಕ್ಕೆ ಹೆಚ್ಚಿನ ಮಹತ್ವ : ಪರ್ತಗಾಳಿ ಜೀವೋತ್ತಮ ಮಠಾಧೀಶ

ಶಕ್ತಿ ಸ್ಥಳವಾದ ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಜಲಾಶಯ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಯಾಕೆಂದರೆ ಇಲ್ಲಿನ ಸೊಗಸು ಸವಿದವನಿಗೆ ಮಾತ್ರ ಗೊತ್ತು. ಯಾವ ಫಾಲ್ಸ್‍ಗಳಿಗೂ ತಾನೇನು ಕಡಿಮೆ ಇಲ್ಲ ಎನ್ನುವಂತಹ ರುದ್ರ ರಮಣೀಯತೆಯನ್ನು ಪ್ರದರ್ಶಿಸುವ ಭೀಮಾನದಿಯ ಮೋಹಕನಾಟ್ಯದ ಸೊಬಗು ನಿರ್ಲಿಪ್ತ ಭಾವಗಳಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ.

ಇದನ್ನೂ ಓದಿ : ‘ನಮ್ಮ ಕ್ಲಿನಿಕ್’ ಜಾಲಿಯಲ್ಲಿ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ

ಈ ಮೊದಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳನ್ನು ಹೊರತುಪಡಿಸಿದರೆ ಪ್ರವಾಸಿಗರ ಕೊರತೆ ಇಲ್ಲಿನ ತಾಣಕ್ಕೆ ಕಾಡುತ್ತಿತ್ತು. ಆದರೆ ಈಗ ಭಟ್ಕಳದಲ್ಲಿ ಸುಂದರ ಪ್ರವಾಸಿತಾಣವಾಗಿ ಮಾರ್ಪಡುತ್ತಿರುವ ಕಡವಿನಕಟ್ಟೆ ಜಲಾಶಯಕ್ಕೆ ಕುಟುಂಬ ಸಮೇತ ಹೋಗಿ ಸೌಂದರ್ಯವನ್ನು ಸವಿಯಬಹುದು. ಅಂದಹಾಗೆ, ಜಲಾಶಯದತ್ತ ಇಳಿಯುವ ದುಸ್ಸಾಹಸ ಮಾತ್ರ ಬೇಡ. ಆ ಎಚ್ಚರವಿರಲಿ.

ಇದನ್ನೂ ಓದಿ : ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜೋಗ ಜಲಪಾತ