ಭಟ್ಕಳ: ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಆಸ್ತಿಪಾಸ್ತಿ ಹಾನಿಯಾಗಿವೆ. ತೆಂಗಿನಮರ ಆಟೋ ರಿಕ್ಷಾ ಮೇಲೆ ಬಿದ್ದ ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ಹಾನಿಯಾಗಿರುವ ಘಟನೆ ತಾಲೂಕಿನ ಬೆಂಗ್ರೆಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಪರಮೇಶ್ವರ ಚೌಡ ದೇವಾಡಿಗ ಎನ್ನುವವರಿಗೆ ಸೇರಿದ ಆಟೋ ರಿಕ್ಷಾ ಇದಾಗಿದೆ. ಇವರು ತಮ್ಮ ಮನೆ ಸಮೀಪ ಆಟೋ ರಿಕ್ಷಾ ನಿಲ್ಲಿಸಿದ್ದ ವೇಳೆ ಗಾಳಿ ಮಳೆ ಬಂದಾಗ ಈ ಘಟನೆ ನಡೆದಿದೆ. ಹೆಬಳೆ ಗ್ರಾಮದ ಬಬ್ಬನಕಲನ ಪರಮೇಶ್ವರ ನಾಯ್ಕ ಎನ್ನುವವರ ವಾಸ್ತವ್ಯದ ಮನೆ ಮೇಲೆ ತೆಂಗಿನಮರ ಬಿದ್ದಿದೆ. ಭಾಗಶಃ ಹಾನಿಯಾಗಿದೆ.

ಇದನ್ನೂ ಓದಿ : ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು

ರವಿವಾರ ಬೆಳಿಗ್ಗೆ ಸಂಭವಿಸಿದ ಗಾಳಿ ಮಳೆಗೆ ಶಿರಾಲಿ ಗ್ರಾಮದ ಪ್ರೇಮಾ ಮಂಜುನಾಥ ನಾಯ್ಕ ಇವರ ವಾಸ್ತವ್ಯದ ಮನೆಯ ಮೇಲೆ ಹಲಸಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮುಟ್ಟಳಿ ಗ್ರಾಮ ಪಂಚಾಯತ ವ್ಯಾಪ್ತಿಯ ತಲಾನ ಗ್ರಾಮದ ದುರ್ಗಪ್ಪ ಮಂಜು ನಾಯ್ಕ ಇವರ ವಾಸ್ತವ್ಯದ ಮನೆ ಕೂಡ ಹಾನಿಯಾಗಿದೆ