ಬೆಂಗಳೂರು : ಧಾರವಾಡ ಲೋಕಸಭಾ ಕ್ಷೇತ್ರದದಿಂದ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಘೋಷಣೆ ಮಾಡಿದರು. ಇಲ್ಲಿನ ವೀರಶೈವ ಲಿಂಗಾಯತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ : ಬಾರಕೊಲ್ ಬೋಳೆ – ಅಚ್ಚರಿಗಳ ಮೂಟೆ
ಇತ್ತೀಚೆಗೆ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ದಿಂಗಾಲೇಶ್ವರ ಶ್ರೀಗಳು ಧಾರವಾಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಲ್ಹಾದ್ ಜೋಶಿ ಸ್ಪರ್ಧೆ ಬಗ್ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು. ”ಧಾರವಾಡದಲ್ಲಿ ಭಕ್ತರ ಸಭೆ ಕರೆದು ಚರ್ಚೆ ಮಾಡಲಾಗಿದ್ದು, ಎಲ್ಲರೂ ಸೇರಿ ಒಂದು ತೀರ್ಮಾನ ಮಾಡಿದ್ದಾರೆ. ನಾನು ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಒತ್ತಡ ಹಾಕಿದ್ದಾರೆ. ಉತ್ತರ ಭಾರತದ ರೀತಿಯಲ್ಲಿ ಇಲ್ಲಿಯೂ ಬದಲಾವಣೆ ಆಗಬೇಕು ಅಂತ ಎಲ್ಲರೂ ಸಹ ನನಗೆ ಕರೆ ಮಾಡಿ ಮುಂದಿಟ್ಟ ಹೆಜ್ಜೆ ಹಿಂದಿಡದಂತೆ ಹೇಳಿದ್ದಾರೆ” ಎಂದು ತಿಳಿಸಿದ್ದರು. ಧಾರವಾಡ ಕ್ಷೇತ್ರದಿಂದ ಪ್ರಲ್ಹಾದ್ ಜೋಶಿಯವರನ್ನು ಬದಲಾವಣೆ ಮಾಡಬೇಕೆಂದು ಎಲ್ಲ ಮುಖಂಡರ ಸಭೆ ಕರೆದಾಗ, ಕೆಲವರು ಬದಲಾವಣೆ ಬೇಡ ಎಂದು ಹೇಳಿದರು. ಆದರೆ, ನಾವು ಯಾವುದೇ ಒತ್ತಡ ಹಾಗೂ ಆಮಿಷಕ್ಕೆ ಮಣಿಯುವುದಿಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದರು. ನಮ್ಮ ಗುರುಗಳು ಮತ್ತು ಭಕ್ತರ ನಿರ್ಣಯ ಪಡೆದು, ಅತೀ ಶೀಘ್ರದಲ್ಲೇ ಬೆಂಗಳೂರಿನಲ್ಲಿ ನನ್ನ ತೀರ್ಮಾನ ತಿಳಿಸುತ್ತೇನೆ ಎಂದು ಹೇಳಿದ್ದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇಂದು ಅಧಿಕೃತವಾಗಿ ತಾವೇ ಘೋಷಣೆ ಮಾಡಿಕೊಳ್ಳುವ ಮೂಲಕ ಪ್ರಲ್ಹಾದ್ ಜೋಶಿ ವಿರುದ್ಧ ಸೆಡ್ಡು ಹೊಡೆದಿದ್ದು ಧಾರವಾಡ ಕ್ಷೇತ್ರಕ್ಕೆ ರಂಗು ಬಂದಿದೆ.
ಕಾಂಗ್ರೆಸ್ ಬಿಜೆಪಿ ಮಧ್ಯ ನೇರಾನೇರ ಹಣಾಹಣಿ ಇದ್ದು. ಪಕ್ಷೇತರರಾಗಿ ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಯಿಂದ ರೋಚಕ ಕಣ ಏರ್ಪಟ್ಟಿದೆ.
ಇದನ್ನೂ ಓದಿ : ಸೌದಿ ಅರೇಬಿಯಾದಲ್ಲಿ ಮುಂಡಗೋಡಿನ ಮೂವರು ಸಾವು
5 ಲಕ್ಷ 90 ಸಾವಿರಕ್ಕೂ ಹೆಚ್ಚು ಮತಗಳಿರುವ ಈ ಕ್ಷೇತ್ರದಲ್ಲಿ ಲಿಂಗಾಯತರು ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಶ್ರೀ ಗಳ ಕೈಹಿಡಿತ್ತಾರೋ ಕಾದು ನೋಡಬೇಕಾಗಿದೆ.