ಭಟ್ಕಳ: ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದಿಂದ ದೈಹಿಕ ಶಿಕ್ಷಣ ಶೈಕ್ಷಣಿಕ ಕಾರ್ಯಾಗಾರ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಗುರು ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಭಟ್ ಸೂರಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಧ್ಯಕ್ಷ ಮೋಹನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಪರೀವೀಕ್ಷಕ ದತ್ತಾತ್ರೇಯ ನಾಯ್ಕ ಉಪಸ್ಥಿತರಿದ್ದರು. ಭಟ್ಕಳದಿಂದ ವರ್ಗಾವಣೆಗೊಂಡ ಬೈಂದೂರು ದೈಹಿಕ ಶಿಕ್ಷಣ ಪರೀವೀಕ್ಷಕ ಚಂದ್ರಶೇಖರ ಶೆಟ್ಟಿ, ಕುಂದಾಪುರ ದೈಹಿಕ ಶಿಕ್ಷಣ ಪರೀವೀಕ್ಷಕ ರವೀಂದ್ರ ನಾಯ್ಕ ಅವರನ್ನು ಗೌರವಿಸಲಾಯಿತು. ಇದಲ್ಲದೆ ಕುಮಟಾ ತಾಲೂಕಿಗೆ ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ ನಾಯಕ, ಶೈಲಜಾ ನಾಯಕ, ಉಮೇಶ ನಾಯಕ, ರಾಜು ಗಾಂವಕರ, ಶೋಭಾ ನಾಯ್ಕ, ಕುಸುಮಾ ನಾಯ್ಕ, ಪ್ರಭಾವತಿ ನಾಯ್ಕ ರವರನ್ನು ಗೌರವಿಸಲಾಯಿತು. ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮತ್ತು ಪ್ರಾಥಮಿಕ ದೈಹಿಕ ಶಿಕ್ಷಣ ರಾಜ್ಯಾಧ್ಯಕ್ಷ ರವೀಂದ್ರ ಭಟ್ ಸೂರಿ ಅವರನ್ನೂ ಸನ್ಮಾನಿಸಲಾಯಿತು.
ಇದನ್ನೂ ಓದಿ: ಭಟ್ಕಳದ ವಿದ್ಯಾರ್ಥಿಗಳ ಚಿನ್ನದ ಸಾಧನೆ
ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕ ಸಂಘದ ತಾಲೂಕ ಅಧ್ಯಕ್ಷ ಶ್ರೀಧರ ಹೆಗಡೆ ಸ್ವಾಗತಿಸಿದರೆ, ಯುವಜನ ಸೇವಾ ಕ್ರೀಡಾಧಿಕಾರಿ ನಾಗರಾಜ ಪಟಗಾರ ವಂದಿಸಿದರು. ಚಿತ್ರಾಪುರ ಸ.ಮಾ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಕ ರಾಮದಾಸ ಆಗೇರ ನಿರ್ವಹಿಸಿದರು.
ಇದನ್ನೂ ಓದಿ: ಭಟ್ಕಳದಲ್ಲಿ 2 ಪಲ್ಲಕ್ಕಿ ಬಸ್‌ಗಳಿಗೆ ಚಾಲನೆ