ಭಟ್ಕಳ: ಇಲ್ಲಿನ ಬಂದರ ರಸ್ತೆಯ ಶ್ರೀ ನಾಗಮಾಸ್ತಿ ದೇವರ ೧೪ನೇ ವರ್ಷದ ವರ್ಧಂತಿ ಉತ್ಸವ ಮಾರ್ಚ ೧೩ರಂದು ನಡೆಯಲಿದೆ.
ಇದನ್ನೂ ಓದಿ : ಪೌರಕಾರ್ಮಿಕರು ವೈದ್ಯರಿದ್ದಂತೆ ಎಂದ ಸಚಿವ ವೈದ್ಯ
ನಾಗಮಾಸ್ತಿ ದೇವರ ವರ್ಧಂತಿ ಉತ್ಸವದ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ ಮಹಾಪೂಜೆ ನಂತರ
೧ ಗಂಟೆಯಿಂದ ೩-೩೦ ರವರೆಗೆ ಉದ್ಯಮಿ ಎಲ್.ಎಸ್. ನಾಯ್ಕ ಹಾಗೂ ಕುಟುಂಬದವರಿಂದ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೮ ಗಂಟೆಗೆ ಮನರಂಜನಾ ಕಾರ್ಯಕ್ರಮ ಜರುಗಲಿದೆ.
ಇದನ್ನೂ ಓದಿ : ಜಿಲ್ಲೆಯ ಎಲ್ಲ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲು ಬದ್ಧ https://www.facebook.com/share/p/t5tBw9yoHFE6EXKe/?mibextid=Nif5oz
ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.