ಭಟ್ಕಳ: ಮಾರ್ಚ್ ೨೦೨೪ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ತಾಲೂಕಿನ ಮುರ್ಡೇಶ್ವರದ ನಿರಂಜನ ಶ್ರೀಧರ ಭಟ್ಟ ಶೇ.೯೭.೧೬ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ.
ಇದನ್ನೂ ಓದಿ : ಆನಂದ ಆಶ್ರಮ ಕಾನ್ವೆಂಟ್ ಪಿಯು ವಿದ್ಯಾರ್ಥಿಗಳ ಸಾಧನೆ
ಮುರ್ಡೇಶ್ವರದ ಆರ್.ಎನ್.ಎಸ್. ಪಿ.ಯು. ಕಾಲೇಜಿನ ವಿದ್ಯಾರ್ಥಿಯಾದ ನಿರಂಜನ ಶ್ರೀಧರ ಭಟ್ಟ, ಗಣಿತ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಗಳಿಸಿದ್ದಾನೆ. ಈತ ಶಿಕ್ಷಕರಾದ ಶ್ರೀಧರ ಭಟ್ಟ ಹಾಗೂ ಜಯಲಕ್ಷ್ಮಿ ಭಟ್ಟರವರ ಪುತ್ರ. ಈತನ ಸಾಧನೆಗೆ ಹವ್ಯಕ ಮಂಡಲದ ಭಟ್ಕಳ ವಲಯದ ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.