ಭಟ್ಕಳ: ನೇಹಾ ಕೊಲೆ ಪ್ರಕರಣದಲ್ಲಿ ವಿಡಿಯೋ ಚಿತ್ರೀಕರಣ ಸಿಗದಿದ್ದರೆ ಕಾಂಗ್ರೆಸ್, ಕೊಲೆ ಅಲ್ಲ ಅದು ಸಹಜ ಸಾವು ಎನ್ನುತ್ತಿತ್ತು ಎಂದು ಬಿಜೆಪಿ ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದ್ದಾರೆ. ಅವರು ಭಟ್ಕಳ ವಿಶ್ವ ಹಿಂದೂ ಪರಿಷತ್  ಮತ್ತು  ಹಿಂದೂ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಇದನ್ನೂ ಓದಿ : ಹಿಂದೂ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆರೋಪಿ ವಿರುದ್ಧ ನೇರ ಕ್ರಮಕ್ಕೆ ಆಗ್ರಹ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂಥ ಪ್ರಕರಣಗಳು ಹೆಚ್ಚಾಗಿ ಮರುಕಳಿಸುತ್ತಿವೆ. ಕಳೆದ ಐದು ವರ್ಷ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿರುವಾಗ, ನಾನು ಶಾಸಕನಾಗಿರುವಾಗ ಇಂಥ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದು ೯ ತಿಂಗಳಿನಲ್ಲಿ ಇಂಥ ಕೊಲೆಗಳು ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬಂದಿದೆ. ಇದಕ್ಕೆ ಸಂಪೂರ್ಣ ಸಹಕಾರ ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರ. ಇದಕ್ಕೆ ನೇರವಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್   ಫಾಲೋವ್ ಮಾಡಲು   ಇಲ್ಲಿ ಒತ್ತಿ.

ನೇಹಾ ಕೊಲೆ ಪ್ರಕರಣದಲ್ಲಿ ವಿಡಿಯೋ ಚಿತ್ರೀಕರಣ ಇಲ್ಲದ ಪಕ್ಷದಲ್ಲಿ ಕಾಂಗ್ರೆಸ್ನವರು ಇದನ್ನು ಕೊಲೆ ಅಲ್ಲ ಎಂದು ಹೇಳುತ್ತಿದ್ದರು. ಕಳೆದ ವಿಧಾನಸಭೆ ಕಲಾಪ ನಡೆಯುವ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದ ವ್ಯಕ್ತಿಯನ್ನು ಬಂಧಿಸಲಿಲ್ಲ. ಬದಲಿಗೆ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಲೇ ಇಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳಿತು. ಸ್ನೇಹ ಕೊಲೆ ಪ್ರಕರಣದಲ್ಲೂ ವಿಡಿಯೋ ಚಿತ್ರೀಕರಣ ಇಲ್ಲದಿದ್ದರೆ ಇದು ಕೊಲೆಯಲ್ಲ ಎಂದು ಹೇಳುತ್ತಿದ್ದರು. ಕಾಂಗ್ರೆಸ್ ಸರ್ಕಾರ ಇಂಥ ದೇಶದ್ರೋಹಿಗಳಿಗೆ, ದುಷ್ಟರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಜನರಿಗೆ ನ್ಯಾಯ ಕೊಡಿಸಲು ಭಾರತೀಯ ಜನತಾ ಪಾರ್ಟಿ ಜನರೊಂದಿಗೆ ನಿಲ್ಲುತ್ತದೆ. ಸಂಪೂರ್ಣ ನ್ಯಾಯ ಕೊಡಿಸಲು ಭಾರತೀಯ ಜನತಾ ಪಾರ್ಟಿಯೊಂದಿಗೆ ನಾನು ಇದ್ದೇನೆ. ವಿಶ್ವ ಹಿಂದೂ ಪರಿಷತ್ ಸಂಘಟನೆ ಮೂಲಕ ಎಸಿ ಅವರಿಗೆ ಮನವಿ ಕೊಡುವ ಕೆಲಸ ಮಾಡುತಿದ್ದೇವೆ ಎಂದರು.