ಹೊನ್ನಾವರ : ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ತಾಲೂಕಿನ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ರಾಜ್ಯಪಾಲರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದರು.

ಇದನ್ನೂ ಓದಿ : ಸಾರದಹೊಳೆ ಹನುಮಂತ ದೇವರ ವರ್ಧಂತ್ಯೋತ್ಸವಕ್ಕೆ ಚಾಲನೆ

ಕಾಂಗ್ರೆಸ್ ಮತಕ್ಕಾಗಿ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತ ಬಹುಸಂಖ್ಯಾತ ಹಿಂದುಗಳನ್ನು ತುಳಿಯುವ ಕೆಲಸ ಮಾಡುತ್ತಿದೆ. ಹಿಂದೂ ಸಮಾಜ ಜಾಗೃತವಾಗಿದೆ. ಸರಕಾರ ಮಾಡುವ ಎಲ್ಲಾ ಅತ್ಯಾಚಾರ, ಅನ್ಯಾಯ, ಅನಾಚಾರಗಳನ್ನು ಸಹಿಸಿಕೊಂಡು ಬದುಕುವ ಕಾಲ ಹೋಗಿದೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ವಿಚಾರಗಳಿಗೆ ಸಮಸ್ತ ಹಿಂದೂ ಬಾಂಧವರು ಒಟ್ಟಾಗಿ ಹೋರಾಡುವ ಕಾಲ ಬಂದಿದೆ. ಎಷ್ಟು ಹಿಂದೂ ಹೆಣಗಳು ಬಿದ್ದರೂ ಮುಸ್ಲಿಂ ಓಲೈಕೆ ರಾಜಕಾರಣ ಎಂದಿಗೂ ಕಡಿಮೆ ಆಗುತ್ತಿಲ್ಲ. ಇದರ ಫಲ ಭವಿಷ್ಯದಲ್ಲಿ ಸಿಗಲಿದೆ. ಫಯಾಜ್‌ನೇ ನೇಹಾ ಹಿರೇಮಠ ಕೊಲೆ ಮಾಡಿದ್ದು ಸಿ.ಸಿ. ಟಿ.ವಿ.ಯಲ್ಲಿ ಸೆರೆಯಾಗಿದೆ. ಇದಕ್ಕೆ ಪ್ರತ್ಯೇಕ ಸಾಕ್ಷಿಗಳ ಅವಶ್ಯಕತೆ ಇಲ್ಲ. ತಕ್ಷಣವೇ ಅಂತಹ ಘೋರ ಅಪರಾಧಕ್ಕೆ ಉಗ್ರವಾದ ಶಿಕ್ಷೆಯನ್ನು ವಿಧಿಸಬೇಕು. ಇನ್ನು ಮುಂದಿನ ದಿನಗಳಲ್ಲಿ ಇಂತಹ ಘೋರ ಕೃತ್ಯಗಳು ಮರುಕಳಿಸದೇ ಇರುವ ಹಾಗೆ ಕ್ರಮ ಕೈಗೊಳ್ಳಬೇಕೆಂಬುದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ವಿಶ್ವ ಹಿಂದು ಪರಿಷತ್ತಿನ ಮುಖಂಡ ಜೆ.ಟಿ.ಪೈ ಮಾತನಾಡಿ, ಅಮಾಯಕರ ಬರ್ಬರ ಕೊಲೆ ಮಾಡಿರುವುದು ದುಃಖದ ಸಂಗತಿ. ಕಳೆದ ೧೦ ತಿಂಗಳಿನಿಂದಲೂ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತ ಬಹುಸಂಖ್ಯಾತ ಹಿಂದುಗಳನ್ನು ತುಳಿಯುವ ಕೆಲಸ ಮಾಡುತ್ತಿದೆ. ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಎಂ.ಜಿ.ಭಟ್ ಕೂಜಳ್ಳಿ ಮಾತನಾಡಿ, ರಾಜ್ಯವೇ ಬೆಚ್ಚಿ ಬೀಳಿಸುವ ರೀತಿ ಪ್ರಕರಣ ನಡೆದಿದೆ. ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಇಂತಹ ಘಟನೆ ಮರುಕಳಿಸುತ್ತಿದೆ. ಸಿದ್ದರಾಮಯ್ಯನವರು ನಾನು ಹಿಂದು, ಆದರೆ ಹಿಂದುತ್ವವನ್ನು ವಿರೋಧಿಸುತ್ತೇನೆ ಎನ್ನುತ್ತಾರೆ. ಹಿಂದುತ್ವವವನ್ನು ವಿರೋಧ ಮಾಡುವವರು ಯಾವ ರೀತಿ ಹಿಂದು ಎಂದು ಅರ್ಥವಾಗುವುದಿಲ್ಲ. ಮತಾಂಧ ಶಕ್ತಿಗಳ ಅಟ್ಟಹಾಸ ಜಾಸ್ತಿಯಾಗುತ್ತಿದೆ. ನೇಹಾರನ್ನು ಕಾಲೇಜ ಕ್ಯಾಂಪಸ್ಸಿನೊಳಗೆ ಇರಿದು ಕೊಲ್ಲುತ್ತಾರೆಂದರೆ ಕಾನೂನು ವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸುವಂತಾಗಿದೆ. ಹನುಮಾನ ಚಾಲೀಸ್ ಹಾಕಿದ ಅಂಗಡಿಯವನನ್ನು ಹಿಡಿದು ಹೊಡೆಯುತ್ತಾರೆ. ಹಿಂದುಗಳು ಪ್ರತಿಭಟನೆ ಮಾಡಿದಾಗ ಇಬ್ಬರು ಮುಸ್ಲಿಮರ ಜೊತೆಗೆ ಇಬ್ಬರು ಹಿಂದುಗಳನ್ನು ಸೇರಿಸಿ ಪ್ರಕರಣ ದಾಖಲಿಸುತ್ತಾರೆ. ಮುಸ್ಲಿಮರನ್ನು ಓಲೈಸುವುದು, ಮುಸ್ಲಿಮರನ್ನು ರಕ್ಷಣೆ ಮಾಡುವುದು ಕಾಂಗ್ರೆಸ್ ಸರಕಾರದ ಉದ್ದೇಶ ಎಂದು ಆಪಾದಿಸಿದರು.

ನೇಹಾರ ತಂದೆ ಕಾಂಗ್ರೆಸ್ಸಿನ ಮುಖಂಡರು. ಕೆಲವು ದಿನಗಳ ಹಿಂದೆ ಮುಸ್ಲಿಮರಿಗೆ ಹಬ್ಬದ ಶುಭಾಶಯ ಕಳಿಸಿದ್ದರು. ಅವರಿಗೆ ಮುಸ್ಲಿಮರು ಮಗಳ ಕೊಲೆ ಮಾಡುವ ಮೂಲಕ ಉಡುಗೊರೆಯಾಗಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದು ವೈಯಕ್ತಿಕ ಕಾರಣ ಎನ್ನುತ್ತಾರೆ. ವೈಯಕ್ತಿಕ ಕಾರಣವಾದರೆ ಕೊಲೆ ಮಾಡಬಹುದೇ? ಗೃಹ ಸಚಿವ ಜಿ. ಪರಮೇಶ್ವರ ಇನ್ನೊಂದು ರೀತಿ ಹೇಳಿಕೆ ಕೊಡುತ್ತಾರೆ. ಕಾಂಗ್ರೆಸ್ ಮತಾಂಧ ಶಕ್ತಿಗಳ ಪರವಾಗಿ ನಿಂತಿದೆ. ಇಡೀ ಹಿಂದು ಸಮಾಜ ತಿರುಗಿ ಬಿದ್ದರೆ ಕಾನೂನು ಸುವ್ಯವಸ್ಥೆ ಸಹಿಸಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ತಿರುಗಿ ಬೀಳಬಹುದು ಎಂದು ಎಚ್ಚರಿಸಿದರು.

ಜಿ.ಪಂ. ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ, ಸನಾತನ ಧರ್ಮ ಹಾಗೂ ಹಿಂದುತ್ವ ಜಾತಿ ಅಲ್ಲ, ಜೀವನಶೈಲಿ. ಅದನ್ನು ಅನುಸರಿಸಬೇಕು.
ಸಿದ್ದರಾಮಯ್ಯ ಮುಂದಿನ ಜನ್ಮವಿದ್ದರೆ ಮುಸ್ಲೀಂನಾಗಿ ಹುಟ್ಟಲು ಬಯಸುತ್ತೇನೆ ಎನ್ನುತ್ತಾರೆ. ಮುಂದಿನ ಜನ್ಮದಲ್ಲೇಕೆ, ಇದೇ ಜನ್ಮದಲ್ಲೇ ಆಗಿಬಿಡಲಿ. ಸಿದ್ದರಾಮಯ್ಯನವರಿಗೆ ಮುಸ್ಲಿಮರ ಮೇಲೆ ಬಹಳ ಪ್ರೀತಿ ಇದೆಯಲ್ಲ. ಅವರದೇ ಶರಿಯಾ ಕಾನೂನಿನಲ್ಲಿರುವಂತೆ ಕೊಲೆ ಮಾಡಿದವನಿಗೆ ಶಿಕ್ಷೆ ವಿಧಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಶಿವಾನಂದ ಹೆಗಡೆ ಕಡತೋಕ ಮಾತನಾಡಿ, ನೇಹಾರ ಹತ್ಯೆ ಇಡೀ ದೇಶದ ಹಿಂದುಗಳಿಗೆ ನೋವುಂಟು ಮಾಡಿದೆ. ಸಿದ್ದರಾಮಯ್ಯ ಸರಕಾರದ ಕಾರ್ಯ ನಿರ್ವಹಣೆ ಎತ್ತ ಸಾಗುತ್ತಿದೆ? ಸರಣಿ ಸಾವುಗಳು ನಡೆಯುತ್ತಿವೆ. ಜಿಹಾದಿ ಮನಸ್ಥಿತಿ ಎಲ್ಲೆಡೆ ವಿಜೃಂಭಿಸುತ್ತಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಹಿಂದುಗಳಿಗೆ ತಮ್ಮ ಧರ್ಮವನ್ನು ಕಾಪಾಡಿಕೊಳ್ಳುವುದೇ ಸವಾಲಿನಂತಾಗಿದೆ ಎಂದು ಆರೋಪಿಸಿದರು.

ನೇಹಾರ ಹತ್ಯೆ ಖಂಡಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ರಾಜೇಶ ಭಂಡಾರಿ ಮನವಿ ಪತ್ರ ಓದಿದರು. ತಹಶೀಲ್ದಾರ ರವಿರಾಜ ದೀಕ್ಷಿತ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೇಶವ ನಾಯ್ಕ ಬಳ್ಕೂರ್, ಜಿ.ಜಿ.ಶಂಕರ, ಹರಿಶ್ಚಂದ್ರ ನಾಯ್ಕ, ಗಣಪತಿ ಗೌಡ ಚಿತ್ತಾರ, ಯೋಗೀಶ ಮೇಸ್ತ , ಸಂಜು ಶೇಟ್, ವಿಜು ಕಾಮತ್, ಗಣಪತಿ ಬಿ.ಟಿ., ಎಂ.ಎಸ್.ಹೆಗಡೆ ಕಣ್ಣಿ, ಅಜಿತ್ ಹಳದೀಪುರ, ರಾಜೇಶ ಸಾಳೆಹಿತ್ತಲ್, ಎಚ್.ಆರ್.ಗಣೇಶ, ನವೀನ ಹಳದೀಪುರ, ಗಣಪತಿ ಹಳದೀಪುರ, ಗೋವಿಂದ ಗೌಡ, ಪಪಂ ಸದಸ್ಯ ಕಿರಣ ಹೆಗಡೆ, ಹಿಂದು ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.