ಭಟ್ಕಳ: ತಾಲೂಕಿನ ಬೆಳ್ಕೆ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನಿಗೆ ನಾಗರ ಹಾವು ಕಡಿದಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ : ಗೊರಟೆ ಪ್ರೌಢಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ

ಹೊನ್ನಪ್ಪ ನಾರಾಯಣ ನಾಯ್ಕ ನಾಗರ ಹಾವು ಕಡಿದು ಗಾಯಗೊಂಡ ಯುವಕ. ಇವರು ಎಂದಿನಂತೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಗ್ರಾಹಕರಿಗೆ ಅಕ್ಕಿ ವಿತರಿಸುತ್ತಿದ್ದರು. ಅಕ್ಕಿ ಕೊಡಲೆಂದು ಅಕ್ಕಿ ಚೀಲವನ್ನು ಹಿಡಿದಾಗ ಅಲ್ಲೇ ಚೀಲದ ಪಕ್ಕದಲ್ಲಿದ್ದ ನಾಗರ ಹಾವು ಇವರಿಗೆ ಕಡಿದಿದೆ. ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಅಲ್ಲಿದ್ದ ನಾಗರ ಹಾವನ್ನು ಉರಗ ರಕ್ಷಕ ಹಿಡಿದು ಕಾಡಿಗೆ ಬಿಟ್ಟಿದ್ದಾನೆ.

ವಿಡಿಯೋ ನೋಡಿ : ನ್ಯಾಯಬೆಲೆ ಅಂಗಡಿಗೆ ನುಗ್ಗಿದ ನಾಗರಹಾವು ರಕ್ಷಣೆ