ಭಟ್ಕಳ : ಪಕ್ಷ ವಿರೋಧಿ ಮಾಡುವವರಿಗೆ ಯಾವುದೇ ಅಧಿಕಾರ ನೀಡದೆ ಅವರನ್ನು ದೂರವಿಡಿ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹೇಳಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಅವರು ಮಂಗಳವಾರ ಇಲ್ಲಿನ ಆಸರಕೇರಿ ಸಭಾಭವನದಲ್ಲಿ ನಡೆದ ನೂತನ ಸಂಸದರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಕೆಲವರು ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸ್ತಾರೆ. ವಿಧಾನಸಭಾ ಚುನಾವಣೆ ಬಂತೆಂದರೆ ನಾನು ಕಾಂಗ್ರೆಸ್ ಪಾರ್ಟಿ ಸಪೋರ್ಟ್ ಮಾಡುತ್ತೇನೆ. ಲೋಕಸಭಾ ಚುನಾವಣೆ ಬಂದರೆ ನಾನು ಬಿಜೆಪಿ ಪಕ್ಷಕೆ ಸಪೋರ್ಟ್ ಮಾಡುತ್ತೇನೆ ಎನ್ನುವ ಪಕ್ಷ ವಿರೋಧಿಗಳನ್ನು ಪಕ್ಷದಿಂದ ದೂರವಿಡಿ. ಭಟ್ಕಳದಲ್ಲಿ ಬಿಜೆಪಿ ಬೆಳೆಯಬೇಕು. ಭಟ್ಕಳದಲ್ಲಿ ಬಿಜೆಪಿ ಪಕ್ಷದ ಬಾವುಟ ಹಾರಬೇಕು ಎಂದರು.

ಇದನ್ನೂ ಓದಿ : ಚಟುವಟಿಕೆಯ ಕೇಂದ್ರ ಬಿಂದು ಸಚಿನ್ ಮಹಾಲೆ : ವಿಶ್ವೇಶ್ವರ ಹೆಗಡೆ ಕಾಗೇರಿ

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಾತನಾಡಿ ಈ ಬಾರಿಯ ಲೋಕ ಸಭಾ ಚುನಾವಣಾ ಗೆಲುವು ರಾಜ್ಯವೇ ಉತ್ತರ ಕನ್ನಡ ಜಿಲ್ಲೆಯನ್ನು ನೋಡುವಂತೆ ಮಾಡಿದೆ. ಈ ಗೆಲುವು ನಮ್ಮ ನಾಯಕರು, ಕಾರ್ಯಕರ್ತರು ಹಾಗೂ ಬೂತ್ ಗಳಿಗೆ ಬಂದು ಮತ ಹಾಕಿದ ನಮ್ಮ ಮತದಾರರಿಗೆ ಅರ್ಪಣೆ.
ನಮ್ಮ ತಾಲೂಕಿನ ಹಳ್ಳಿ ಭಾಗಗಳಲ್ಲಿ ಈ ಬಾರಿ ೯೫ಕ್ಕೂ ಹೆಚ್ಚು ಶೇಕಡಾ ಮತದಾನವಾಗಿದೆ. ಮತದಾರ ಮನಸ್ಸು ಚುನಾವಣೆಯಿಂದ ಚುನಾವಣೆಗೆ ಬದಲಾಗುತ್ತಿರುತ್ತದೆ. ಇದಕ್ಕಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಮತ ಹಾಕಿದ ಮತದಾರರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ಮತ ಚಲಾಯಿಸುವಂತೆ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ : ‘ಮನೆಗೊಂದು ಗಿಡ’ ಅಭಿಯಾನಕ್ಕೆ ಚಾಲನೆ

ಭಟ್ಕಳ ವಿಧಾನ ಸಭಾ ಕ್ಷೇತ್ರದ ಸಂಚಾಲಕರಾದ  ಡಾ. ಜಿ.ಜಿ ಹೆಗ್ಡೆ ಮಾತನಾಡಿ, ನಮ್ಮ ಸಂಸದರು ಮುಂದಿನ ಲೋಕಸಭಾ ಸದನದಲ್ಲಿ ಮೋದಿಯವರಿಗೆ ಭಟ್ಕಳ ಮಲ್ಲಿಗೆ ಹಾರವನ್ನು ಹಾಕಿ ಗೌರವಿಸಬೇಕು. ಆ ಮೂಲಕ ಭಟ್ಕಳ ಮಲ್ಲಿಗೆಯನ್ನು ಇಂಟರ್ ನ್ಯಾಷನಲ್ ಬ್ರಾಂಡ್ ಆಗಿ ಮಾಡಬೇಕು ಎಂದು ಸಂಸದರಲ್ಲಿ ವಿನಂತಿ ಮಾಡಿಕೊಂಡರು.

ಇದನ್ನೂ ಓದಿ : ಸೊಳ್ಳೆ ಉತ್ಪತ್ತಿ ಕೇಂದ್ರವಾಗಿರುವ ಬಸ್ ನಿಲ್ದಾಣದ ಶೌಚಾಲಯ

ಜೆ.ಡಿ.ಎಸ್ ತಾಲೂಕಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ಭಟ್ಕಳ ತಾಲೂಕಿನಲ್ಲಿ ಐ.ಆರ್.ಬಿ. ಕಂಪನಿಯವರು ರಸ್ತೆಯನ್ನು ಸಂಪೂರ್ಣವಾಗಿ ಹದಗೆಟ್ಟಿಸಿದ್ದಾರೆ. ಆ ಬಗ್ಗೆ ಸಂಸದರು ಹಮನಹರಿಸಬೇಕು ಮತ್ತು ನಮ್ಮ ಜಿಲ್ಲೆಯಲ್ಲಿರುವ ಅರಣ್ಯ ಅತಿಕ್ರಮಣವನ್ನು ಸರಿಪಡಿಸುವಂತೆ ಕೋರಿಕೊಂಡರು.

ಇದನ್ನೂ ಓದಿ : ತುಂಬಿ ತುಳುಕುತ್ತಿದೆ ಭಟ್ಕಳದ ಭೀಮಾನದಿಯ ಕಡವಿನಕಟ್ಟೆ ಜಲಾಶಯ

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎನ್.ಹೆಗಡೆ, ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಭಟ್ಕಳ ಮಂಡಲ ಪ್ರಭಾರಿ ಹೇಮಂತ ಗಾಂವ್ಕರ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯ್ಕ, ಸುಬ್ರಾಯ ದೇವಡಿಗ, ಶ್ರೀನಿವಾಸ ನಾಯ್ಕ, ಮೋಹನ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಮತ್ತಿತರರು ಉಪಸ್ಥಿತರಿದ್ದರು.