ಮಂಗಳೂರು : ಪಣಂಬೂರು ತೀರದಲ್ಲಿ ನೀರಾಟವಾಡುತ್ತಿದ್ದ ಮೂವರು ಯುವಕರು ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಇದನ್ನೂ ಓದಿ: ಕಡಲೆ ರಾಶಿ ಮಾಡುವ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆ ಸಾವು
ಬಟ್ಟೆ ಪೊರ್ಕೋಡಿ ನಿವಾಸಿಗಳಾದ ಮಿಲನ್(20), ಲಿಖಿತ್ (18), ನಾಗರಾಜ್ (24) ನಾಪತ್ತೆಯಾದವರು. ಮಿಲನ್ ಮಂಗಳೂರಿನಲ್ಲಿ ಮೀಶೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಲಿಖಿತ್ ಕೈಕಂಬದ ರೋಶಾ ಮಿಸ್ತಿಕಾ ಕಾಲೇಜಿನಲ್ಲಿ ಮೊದಲ ಪಿಯುಸಿ ಓದುತ್ತಿದ್ದ. ನಾಗರಾಜ್ ಬೈಕಂಪಾಡಿಯಲ್ಲಿ ಎಂಎಂಆರ್ ಕಂಪನಿಯಲ್ಲಿ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ.
ಪಣಂಬೂರು ತೀರದಲ್ಲಿ ಲೈಫ್ ಗಾರ್ಡ್ ಗಳು ಮುಂದೆ ಹೋಗದಂತೆ ಸೂಚನೆ ನೀಡುತ್ತಿದ್ದರೂ ಅದನ್ನು ಲೆಕ್ಕಿಸದೆ ನೀರಿನ ಅಲೆಯಲ್ಲಿ ಮುಂದೆ ಹೋಗುತ್ತಾ ಆಟವಾಡುತ್ತಿದ್ದರು. ದಿಢೀರ್ ಬಂದ ದೊಡ್ಡದೊಂದು ಅಲೆಯಲ್ಲಿ ಮೂವರೂ ಸಿಲುಕಿದ್ದು, ನೀರಿನಾಳಕ್ಕೆ ಎಳೆದೊಯ್ದಿದೆ. ಕೂಡಲೇ ಲೈಫ್ ಗಾರ್ಡ್ సిబంది ಹುಡುಕಾಟ ನಡೆಸಿದ್ದಾರೆ. ಆನಂತರ, ಮೀನುಗಾರರು, ಪಣಂಬೂರು ಪೊಲೀಸರು ಮತ್ತು ಅಗ್ನಿಶಾಮಕ ದಳ ಆಗಮಿಸಿ ಹುಡುಕಾಟ ನಡೆಸಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿಡಿಯೋ ನೋಡಿ : ಕರಡಿ ಮರಿಗಳ ಮುದ್ದಿನ ಆಟ https://www.facebook.com/reel/223487997458102