ಸಾಗರ : ಶರಾವತಿ ನದಿ ಕಣಿವೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕಲಾರಂಭಿಸಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕ್ಷೀರ ಸಾಗರವೇ ಹರಿಯುತ್ತಿದೆಯೇನು ಎನ್ನುವಂತೆ ಭಾಸವಾಗುತ್ತಿದೆ.

ಜೋಗದ ಸಿರಿ : ಫೇಸ್‌ಬುಕ್‌ ರೀಲ್ / ಇನ್ಸ್ಟಾಗ್ರಾಂನಲ್ಲಿ ರೀಲ್

ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಭರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಕೆಲವು  ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ.
ಜೋಗ ಜಲಪಾತದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತ ಮೈದುಂಬಲಾರಂಭಿಸಿದೆ. ಜಲಾಶಯದಿಂದ ಜಲಪಾತದ ನಡುವಿನ ಪ್ರದೇಶದಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದಾಗಿ ಜೋಗ ಜಲಪಾತಕ್ಕೆ ಹರಿವು ಹೆಚ್ಚಿದೆ. ರಾಜಾ –ರಾಣಿ- ರೋರರ್- ರಾಕೆಟ್ ಫಾಲ್ಸ್ ಗಳು ಒಂದಕ್ಕಿಂತ ಒಂದು ಹೆಚ್ಚಿನ ರಭಸದಿಂದ ಧುಮ್ಮಿಕ್ಕುತ್ತಿವೆ.

ಇದನ್ನೂ ಓದಿ : ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ವಿದ್ಯಾರ್ಥಿಗಳು !