ಭಟ್ಕಳ : ತಾಲೂಕಿನ ಮುರ್ಡೇಶ್ವರ ಮಾವಳ್ಳಿ 1 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾವಿ ತೋಡುವಾಗ ಮರದ ಬೃಹತ್ ತುಂಡು ಪತ್ತೆಯಾಗಿದೆ.

ಇದನ್ನೂ ಓದಿ : ಚುನಾವಣಾ ಖರ್ಚಿಗೆ ಚುರುಮುರಿ ಮಾರಿ ಕೋಟಗೆ ₹25000 ಕೊಟ್ಟರು!

ನೇರಿಕುಳಿಯ ಮಾಬ್ಲು ಜಟ್ಟ ನಾಯ್ಕ ಅವರ ಜಾಗದಲ್ಲಿ ಹೊಸದಾಗಿ ಬಾವಿ ತೋಡುವಾಗ ಸುಮಾರು 20 ಅಡಿ ಆಳದಲ್ಲಿ ಬಾವಿಗೆ ಅಡ್ಡಲಾಗಿ ಪತ್ತೆಯಾಗಿದೆ.
ಈ ಮರ ಸುಮಾರು 500 ವರ್ಷ ಹಳೆಯದ್ದೆಂದು ಅಂದಾಜಿಸಲಾಗಿದೆ. ಈ ಬಾವಿಯಲ್ಲಿ ದೊರೆತ ದೊಡ್ಡ ಮರವನ್ನು ನೋಡಲು ಊರಿನ, ಪರ ಊರಿನ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಈ ವಿಡಿಯೋ ನೋಡಿ : ಚುನಾವಣೆಗೆ ಸಜ್ಜಾದ ಈಶ್ವರಪ್ಪ  https://www.facebook.com/share/r/ohD9E79yjntwDmCg/?mibextid=oFDknk

ಈ ಮರದ ತುಂಡನ್ನು ಮೀಷಿನ್ ಗಳ ಮೂಲಕ ಕತ್ತರಿಸಿ ಹೊರ ತೆಗೆಯಲಾಗುತ್ತಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಡಿಯೋ ಕೂಡ ನೋಡಿ : ನಮ್ದು ಕುಟುಂಬ ರಾಜಕಾರಣವಲ್ಲ  https://www.facebook.com/share/r/kFVXfpmY9fabyUfX/?mibextid=oFDknk