ಭಟ್ಕಳ: ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಇದನ್ನೂ ಓದಿ : ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಚಿವ ಮಂಕಾಳ ವೈದ್ಯ ಕರೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಟ್ಕಳ ತಾಲೂಕು ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ. ಸವಿತಾ ಕಾಮತ, ಮಹಿಳೆಯರು ಸಮಾಜದ ಮುಖ್ಯ ವಾಹಿನಿಯ ಕಡೆ ಬಂದಾಗ ಮಾತ್ರ ಸಮಾಜ ಸುಧಾರಣೆಯತ್ತ ಮುಖ ಮಾಡುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಸಮಾಜದ ಎಡರು ತೊಡರುಗಳನ್ನು ದಾಟಿ ಒಂದು ಮಹಿಳೆ ಶಿಕ್ಷಣವನ್ನು ಪಡೆಯಬೇಕು. ಒಂದು ಹೆಣ್ಣು ಶಿಕ್ಷಿತರಾದರೆ ಇಡೀ ಸಮಾಜದ ಸುಧಾರಣೆಗೆ ನಾಂದಿ ಹಾಡುತ್ತಾಳೆ ಎಂದರು.

ಇದನ್ನೂ ಓದಿ : ಬೋರ್ಡ್ ಪರೀಕ್ಷೆ ದಿನಾಂಕ ಪ್ರಕಟ

ಮಂಕಿ ವಲಯ ಅರಣ್ಯಾಧಿಕಾರಿ ಸವಿತಾ ದೇವಡಿಗ ಮಾತನಾಡಿ, ಮಹಿಳೆಯರು ಮತ್ತಷ್ಟು ಸಧೃಡ ಮತ್ತು ಸಬಲರಾಗಬೇಕು. ಇಂದಿನ ಕಾಲದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಶಿಕ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಈ ವಿಡಿಯೋ ನೋಡಿ :  https://fb.watch/q_9ZD7hJ7o/?mibextid=Nif5oz

ಶಿಕ್ಷಣಾಧಿಕಾರಿ ಕಛೇರಿಯ ಬಿ.ಆರ್.ಸಿ. ಪೂರ್ಣಿಮಾ ಮೊಗೇರ ಮಾತಾನಾಡಿ, ಹೆಣ್ಣು ಎಂದಿಗೂ ಅಬಲೆಯಲ್ಲ. ಆಕೆಗೆ ಒಂದು ಮನೆಯನ್ನು ನಿರ್ವಹಣೆ ಮಾಡುವ ಕೌಶಲ್ಯವಿದ್ದಂತೆ ಆಕೆ ಇಡೀ ಸಮಾಜದಲ್ಲಿ ಎಲ್ಲರೆದುರು ತಾನು ಉನ್ನತ ಸ್ಥಾನಕ್ಕೇರಿ ಬದುಕಬೇಕು ಎನ್ನುವ ಹಂಬಲ ಇರುತ್ತದೆ. ಅದಕ್ಕೆ ಅವಳು ಬರುವ ಎಲ್ಲಾ ಸಮಸ್ಯೆಗಳನ್ನು ದಾಟಿ ಮುಂದೆ ಸಾಗಿದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾಳೆ ಎಂದರು.


ಶ್ರೀವಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮಮತಾ ಭಟ್ಕಳ ಮಾತನಾಡಿ, ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿ ನಿತ್ಯ ಮಹಿಳಾ ದಿನಾಚರಣೆಯಾಗಿರಬೇಕು ಎಂದರು.

ಬೀನಾ ವೈಧ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ. ಪುಷ್ಪಲತಾ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದ ಮೊದಲು ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ರಂಗೋಲಿ ಸ್ಪರ್ಧೆ, ಅಡುಗೆ ತಯಾರಿಸುವ ಸ್ಪರ್ಧೆ, ಪೆಪರ್ ಕ್ರಾಪ್ಟ್ ಹಾಗೂ ಬೇಬಿ ಶೋ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಮಹಿಳಾ ಶಿಕ್ಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಪ್ರಾಂಶುಪಾಲ ಮಾಧವ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಿರ್ವಹಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಯೀಮ್ ಗೋರಿ ವಂದಿಸಿದರು.