ಹೊನ್ನಾವರ :  ನಗರಬಸ್ತಿಕೇರಿ ಮಾರ್ಗದಲ್ಲಿ ದೊಡ್ಡ ಮರವೊಂದು ಬೈಕ್ ಸವಾರ ದಂಪತಿ ಮೇಲೆ ಬಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಫೇಸ್‌ಬುಕ್‌ ನಲ್ಲಿ ವಿಡಿಯೋ ನೋಡಿ : ಬೈಕ್ ಸವಾರ ದಂಪತಿ ಮೇಲೆ ಬಿದ್ದ ಮರ

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ನೋಡಿ :  ದಾರಿಹೋಕರಿಂದ ರಕ್ಷಣಾ ಕಾರ್ಯ

ಇಂದು(ಜೂ.೨೮) ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಘಟನೆ ನಡೆದಿದೆ. ತಾಲೂಕಿನ ಅನಿಲಗೋಡ ನಿವಾಸಿ, ಬೈಕ್ ಸವಾರ ಬಾಬು ನಾಯ್ಕ(೫೨) ಗಾಯಗೊಂಡವರು. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಅವರ ಧರ್ಮಪತ್ನಿ ಭಾಗೀರಥಿ ನಾಯ್ಕ ಸುರಕ್ಷಿತವಾಗಿದ್ದಾರೆ. ಸಂಪೂರ್ಣ ಮರದ ದಪ್ಪನೆಯ ಕೊಂಬೆ ಟೊಂಗೆಗಳು ಬಿದ್ದರೂ ಬೈಕಿನ ಹಿಂಬದಿಯಲ್ಲಿ ಕುಳಿತ ಭಾಗೀರಥಿ ನಾಯ್ಕ ಅದೃಷ್ಟವಶಾತ್ ಯಾವುದೇ ಗಾಯವಿಲ್ಲದೇ ಪಾರಾಗಿರುವುದು ಪವಾಡವೇ ಸರಿ.

ಇದನ್ನೂ ಓದಿ : ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ

ನಗರಬಸ್ತಿಕೇರಿಯಲ್ಲಿ ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ದಂಪತಿ ಬೈಕಿನಲ್ಲಿ ಬಂದಿದ್ದರು. ವಾಪಸ್ ಅನಿಲಗೋಡಿಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ಬೈಕ್ ಸವಾರರು ಮತ್ತು ಕಾರಿನಲ್ಲಿ ಬರುತ್ತಿದ್ದ ಭಟ್ಕಳದ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಮತ್ತು ಗಣಪತಿ ಗೌಡರು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯ ಮಾಡಿ, ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.