ಭಟ್ಕಳ: ಕುಮಟಾದಲ್ಲಿ ವಾಸವಾಗಿದ್ದ ಭಟ್ಕಳದ ವಾಕರಸಾ ಸಂಸ್ಥೆಯ ಮೆಕ್ಯಾನಿಕ್ ಮನೆಯಲ್ಲಿಯೇ ವಾಂತಿ ಮಾಡಿಕೊಂಡು ಹಠಾತ್ತಾಗಿ ನಿಧನರಾಗಿದ್ದಾರೆ.
ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ :ಫೇಸ್ಬುಕ್ ವಿಡಿಯೋ ವರದಿ / ಇನ್ಸ್ಟಾಗ್ರಾಂನಲ್ಲಿ ವಿಡಿಯೋ ವರದಿ
ವಿಜಯಪುರ ಮೂಲದ ಮುದ್ದೇಬಿಹಾಳದವರಾದ ಹನುಮಂತರಾಯ ಕುಂಬಾರ (೩೬) ಮೃತ ವ್ಯಕ್ತಿ. ಇವರು ಮನೆಯಲ್ಲಿ ಏಕಾಏಕಿ ವಾಂತಿ ಮಾಡಿಕೊಂಡು ಸಾವನಪ್ಪಿದ್ದಾರೆ.
ಇದನ್ನೂ ಓದಿ : ಮುರುಡೇಶ್ವರದ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ನಿಂದ ಸೌಹಾರ್ದ ಕಾರ್ಯಕ್ರಮ
ಇವರು ಕುಮಟಾದ ಹೆಗಡೆ ಕ್ರಾಸ್ ಬಳಿ ವಾಸವಾಗಿದ್ದರು. ಇಂದು (ಜುಲೈ ೧೧ರಂದು) ಬೆಳಿಗ್ಗೆ ಮಗನನ್ನು ಶಾಲೆಗೆ ಬಿಟ್ಟ ನಂತರ ಮನೆಗೆ ಬಂದು ಕುಳಿತಿದ್ದರು. ಸುಮಾರು ೧೦.೩೦ರ ಸುಮಾರಿಗೆ ವಾಂತಿ ಮಾಡಿಕೊಂಡಿದ್ದು ಮೂರ್ಛೆ ಹೋದ ಅವರನ್ನು ಸಹೋದರ ಈರಣ್ಣ ಕಂಬಾರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಸಾವನಪ್ಪಿದ ಬಗ್ಗೆ ಘೋಷಿಸಿದರು. ಹೃದಯಘಾತ ಅಥವಾ ಇನ್ಯಾವುದೋ ರೋಗದಿಂದ ಅವರು ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ತಾಳಮದ್ದಳೆ ಪ್ರದರ್ಶನ