ಚನ್ನಮ್ಮನ ಕಿತ್ತೂರು: ಪ್ರೀತಿಸುತ್ತಿದ್ದ ಯುವತಿಯನ್ನು ಪತಿ ಮನೆಯಿಂದ ಮರಳಿ ಕರೆದುಕೊಂಡು ಬಂದ ಯುವಕ, ತಾನೂ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಪ್ರಿಯತಮನ ಮನೆ ಮುಂದೆ ಏಕಾಂಗಿ ಆಗಿ ಧರಣಿ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.
ಇದರಿಂದ ಎರಡೂ ಕುಟುಂಬದವರ ಮಧ್ಯೆ ಮಾತಿನ ಜಟಾಪಟಿ ನಡೆದಿದೆ. ಯುವಕನ ಮನೆಯವರು ಬಾಗಿಲನ್ನು ಹಾಕಿಕೊಂಡರೆ, ಯುವಕ ಎಲ್ಲೋ ಹೋಗಿದ್ದಾನೆ ಎಂದು ಕುಟುಂಬದವರು ತಿಳಿಸಿದರು.
ಇದನ್ನೂ ಓದಿ : ಓಮ್ನಿ – ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ: 6 ಮಕ್ಕಳು ಸೇರಿ 12 ಮಂದಿ ಗಂಭೀರ
ಇಲ್ಲಿಯ ಸೋಮವಾರ ಪೇಟೆಯ ಯುವಕ– ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವಂತೆ ಯುವತಿ ಮನೆಯವರು ಒಪ್ಪಿಗೆ ನೀಡಿದ್ದರು. ಆದರೆ, ಯುವಕನ ಮನೆಯವರು ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ, ಯುವತಿಯನ್ನು ಬೇರೊಬ್ಬ ವರನೊಂದಿಗೆ ಫೆ.14ರಂದು ಸಂಭ್ರಮದಿಂದ ಮದುವೆ ಮಾಡಿಕೊಟ್ಟಿದ್ದರು.
ಇದನ್ನೂ ಓದಿ: ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವು
ಯುವಕ ನಿರಾಕರಿಸಿದ ಕಾರಣ ನಾನು ಬೇರೊಬ್ಬರನ್ನು ಮದುವೆಯಾದೆ. ಇದನ್ನು ಸಹಿಸದ ಆತ ನಮ್ಮಿಬ್ಬರ ಖಾಸಗಿತನದ ಫೋಟೊಗಳನ್ನು ಗಂಡನ ಮನೆಯವರಿಗೆ ತೋರಿಸಿದ. ಮದುವೆಯಾದ ಬಳಿಕವೂ ಅಲ್ಲಿಂದ ನಾನು ಮರಳಿ ಬರುವಂತೆ ಮಾಡಿದ. ಈಗ ಅವನೂ ಮದುವೆಯಾಗುತ್ತಿಲ್ಲ. ನನಗೆ ನ್ಯಾಯ ಕೊಡಿಸಬೇಕು’ ಎಂದು ಯುವತಿ ಆಗ್ರಹಿಸಿದ್ದಾಳೆ.
ಇದನ್ನೂ ಓದಿ : ಅಪ್ರಾಪ್ತೆಯ ಕತ್ತು ಕೊಯ್ದ ಅಪ್ರಾಪ್ತ ಬಾಲಕರು!
‘ನನ್ನ ಖಾಸಗಿತನದ ಫೋಟೊಗಳನ್ನು ತೋರಿಸಿ ಮದುವೆ ಮುರಿಯಲಾಗಿದೆ ಎಂದು ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಯುವತಿ ದೂರಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಐ ಪ್ರವೀಣ ಗಂಗೋಳ, ‘ಯುವತಿ ದೂರು ನೀಡಿದರೆ ತಕ್ಷಣ ಎಫ್ಐಆರ್ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ.
ವಿಡಿಯೋ ನೋಡಿ : ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆ https://fb.watch/qo3yaVc84k/?mibextid=Nif5oz