ಭಟ್ಕಳ : ಇಲ್ಲಿನ ವಿಶ್ವಕರ್ಮ ಗೆಳೆಯರ ಬಳಗದ ಆಶ್ರಯದಲ್ಲಿ ೭ನೇ ವರ್ಷದ “ಮನೆಗೊಂದು ಗಿಡ” ಅಭಿಯಾನ ನಡೆಯಿತು. ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಗಿಡ ನೆಡುವುದರ ಮುಖಾಂತರ ಅಗ್ನಿಶಾಮಕ ಠಾಣೆಯ ಪ್ರಭಾರ ಅಧಿಕಾರಿ ಮೋಹನ ಶೆಟ್ಟಿ ಮನೆಗೊಂದು ಗಿಡ ಅಭಿಯಾನಕ್ಕೆ ಚಾಲನೆ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸಂಘದ ಉದ್ದೇಶದಂತೆ ಪ್ರತಿ ವರ್ಷವೂ ಒಂದು ಪ್ರದೇಶವನ್ನು ಆಯ್ಕೆ ಮಾಡಿ ೨೦೦ ಗಿಡಗಳನ್ನು ಮನೆ ಮನೆಗೆ ತೆರಳಿ ಗಿಡ ಬೆಳೆಸುವ ಆಸಕ್ತಿ ಇರುವವರಿಗೆ ನೀಡುವುದು ಮನೆಗೊಂದು ಗಿಡ ಅಭಿಯಾನದ ವಿಶೇಷವಾಗಿದೆ. ಸಂಘವು ಅನೇಕ ಸಮಾಜಮುಖಿ ಕೆಲಸದ ಜೊತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ಮಾಡುತ್ತ ಬಂದಿದೆ. ಭಟ್ಕಳದ ಅನೇಕ ಸಂಘ ಸಂಸ್ಥೆಗಳಿಗೂ ಸನ್ಮಾನ ನೀಡಿ ಗೌರವಿಸಿದೆ.
ಇದನ್ನೂ ಓದಿ : ಜುಲೈ ೮ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಣ್ಯ ಇಲಾಖೆಯ ಡಿ ಆರ್ ಎಫ್ ಓ ಸಂದೀಪ್ ಭಂಡಾರಿ, ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿ ರಮೇಶ್ ಶೆಟ್ಟಿ, ಹೆಸ್ಕಾಂನ ಸಹಾಯಕ ಅಭಿಯಂತ ಶಿವಾನಂದ ನಾಯ್ಕ, ಭಟ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಗಜಾನನ ಎನ್ ಆಚಾರ್ಯ, ಕ್ರಿಯಾಶೀಲ ಗೆಳೆಯರ ಬಳಗ ಅಧ್ಯಕ್ಷ ದೀಪಕ ನಾಯ್ಕ ಭಾಗವಹಿಸಿದ್ದರು.
ಇದನ್ನೂ ಓದಿ : ಸೊಳ್ಳೆ ಉತ್ಪತ್ತಿ ಕೇಂದ್ರವಾಗಿರುವ ಬಸ್ ನಿಲ್ದಾಣದ ಶೌಚಾಲಯ
ಸಂಘದ ಅಧ್ಯಕ್ಷ ಗಜಾನನ ಕೆ ಆಚಾರ್ಯ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಶಿಕ್ಷಕ ಸುರೇಶ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು, ರವಿ ಆರ್ ಆಚಾರ್ಯ ವಂದಿಸಿದರು. ವಿಶ್ವಕರ್ಮ ಗೆಳಯರ ಬಳಗದ ಮಾಜಿ ಅಧ್ಯಕ್ಷರು, ಎಲ್ಲ ಸದಸ್ಯರು ಉಪಸ್ಥಿತರಿದ್ದರು. ತದ ನಂತರ ೨೦೦ ಗಿಡಗಳನ್ನು ಮನೆಮನೆಗಳಿಗೆ ಗಿಡಗಳನ್ನು ಹಂಚುವುದರ ಮುಖಾಂತರ ಕಾರ್ಯಕ್ರಮ ಸಂಪನ್ನಗೊಂಡಿತು.
ಇದನ್ನೂ ಓದಿ : ತುಂಬಿ ತುಳುಕುತ್ತಿದೆ ಭಟ್ಕಳದ ಭೀಮಾನದಿಯ ಕಡವಿನಕಟ್ಟೆ ಜಲಾಶಯ