ಕುಮಟಾ: ಶುಕ್ರವಾರ ಬಿದ್ದ ಮಳೆಗೆ ತಾಲೂಕಿನ ಮೊಸಳೆಸಾಲದ ನೀಲಾ ಮೋಹನ ಪಟಗಾರ ಎಂಬುವರ ಮನೆಯ ಗೋಡೆ ತೊಯ್ದ ಪರಿಣಾಮ ಶನಿವಾರ ಕುಸಿದುಬಿದ್ದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಮನೆಯ ಗೋಡೆ ಕುಸಿದ ಪರಿಣಾಮ ಛಾವಣಿಗಿದ್ದ ಹಂಚುಗಳು ಒಡೆದುಹೋಗಿವೆ. ಮನೆಯಲ್ಲಿದ್ದ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.
ತಾಲೂಕಿನಲ್ಲಿ ಎರಡು ದಿನಗಳಿಂದ ಭಾರಿ ಮಳೆ ಮುಂದುವರಿದಿದೆ.

ಇದನ್ನೂ ಓದಿ : ಟಾಪ್ ೧೦ರ ಪಟ್ಟಿಯಲ್ಲಿ ೧೨ ವಿದ್ಯಾರ್ಥಿಗಳು

ಶುಕ್ರವಾರ ಬಿರುಸುಗೊಂಡ ಮಳೆ ಶನಿವಾರವೂ ಮುಂದುವರಿದಿದೆ. ಶುಕ್ರವಾರ ಬೆಳಿಗ್ಗೆ ೮.೩೦ ರಿಂದ ಶನಿವಾರ ಬೆಳಿಗ್ಗೆ ೮.೩೦ರ ವರೆಗೆ ೧೯೭.ಮೀ.ಮೀ ಮಳೆ ಸುರಿದಿರುವುದು ದಾಖಲಾಗಿದೆ. ಶುಕ್ರವಾರ ಸುರಿದ ಮಳೆಗೆ ಹೊಲಿಸಿದರೆ ಶನಿವಾರ ಮಧ್ಯಾಹ್ನದಿಂದ ಮಳೆಯಲ್ಲಿನ ಬಿರುಸು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದಾಗಿದೆ. ಗಾಳಿ ಇಲ್ಲದೆ ನಿರಂತರ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಯಾವ ಭಾಗದಲ್ಲಿ ಅಪಾಯ ಇಲ್ಲವೆ ಅನಾಹುತ ಸಂಭವಿಸಿಲ್ಲ.

ಇದನ್ನೂ ಓದಿ : ಜೂನ್‌ ೮ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ