ಭಟ್ಕಳ: ತಾಲೂಕಿನಲ್ಲಿ ಸೋಮವಾರವೂ ಮಳೆ ಆರ್ಭಟ ಮುಂದುವರೆದಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ತಾಲೂಕಿನಾದ್ಯಂತ ನಿರಂತರ ಸುರಿಯುತ್ತಿರುವ ಮಳೆ ಆರ್ಭಟಕ್ಕೆ ಹಲವೆಡೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಬೇಂಗ್ರೆ ಪಂಚಾಯಿತಿ ವ್ಯಾಪ್ತಿಯ ದೇವಮ್ಮ ಮಂಜು ದೇವಡಿಗ ವಾಸ್ತವ್ಯದ ಕಚ್ಚಾ ಮನೆ ಗೋಡೆ ಕುಸಿದಿದೆ. ಸಣಬಾವಿಯ ಜುವಾಂವ ಜೂಜೆ ಲೂವಿಸ್ ವಾಸ್ತವ್ಯದ ಪಕ್ಕಾ ಮನೆ ಮೇಲೆ ತೆಂಗಿನ ಮರ ಬಿದಿದೆ. ಪಟ್ಟಣದ ರಂಗಿನಕಟ್ಟೆಯಲ್ಲಿರುವ ಅಖಿಲಾ ನಾಯ್ತೆ ಇವರ ಮನೆಯ ಮೇಲ್ಛಾವಣಿಯಾಗಿ ಹಾಗೂ ಮನೆಯ ಮುಂದೆ ಹಾಕಿರುವ ತಗಡಿನ ಶೀಟ್ ಹಾರಿ ಹೋಗಿ ಅಂದಾಜು ರೂಪಾಯಿ ೨ ಲಕ್ಷ ಹಾನಿಯಾಗಿದೆ. ಇವರ ಮನೆ ಪಕ್ಕದ ವಿಠ್ಠಲ ಗೋವಿಂದರಾಯ ಪ್ರಭು ಇವರ ಮನೆಯ ಮೇಲೆ ತಗಡಿನ ಶೀಟ್ ಬಿದ್ದಿದೆ. ೪ ತೆಂಗಿನಮರ, ತಲಾ ೨ ಮಾವಿನ ಮರ, ಅಮ್ಟೆ ಮರ ಉರುಳಿ ಬಿದ್ದಿವೆ. ಎರಡು ವಿದ್ಯುತ್ ಕಂಬಗಳು ಹಾನಿಯಾಗಿವೆ. ಒಟ್ಟು ೧ ಲಕ್ಷ ರೂ ಹಾನಿ ಅಂದಾಜಿಸಲಾಗಿದೆ.
ಇದನ್ನೂ ಓದಿ : ಜುಲೈ ೧೫ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ನಾಳೆಯೂ ರಜೆ :
ಉ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ,ಸಿದ್ದಾಪುರ, ಯಲ್ಲಾಪುರ ಹಾಗೂ ದಾಂಡೇಲಿ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ ೧೬ರಂದು ರಜೆ ಘೋಷಿಸಲಾಗಿದೆ.
ಇದನ್ನೂ ಓದಿ : ಶ್ರೀಗಳ ಜನ್ಮ ಶತಾಬ್ದ ಆರಾಧನಾ ಮಹೋತ್ಸವ ನಿಮಿತ್ತ ಗುರು ನಮನ
ಬಿಳಲಕಂಡ ಗ್ರಾಮದ ಫಾತಿಮಾ ಪರ್ವಿನ್ ಇವರ ವಾಸ್ತವ್ಯದ ಮನೆ ಮೆಲ್ಛಾವಣಿ ಮತ್ತು ಮೆಹಬುಬಿ ಬಡಿಗೇರ ಇವರ ಮನೆ ಮೇಲೆ ಮರ ಬಿದ್ದಿದೆ. ಮಠದಹಿತ್ಲವಿನ ನಾರಾಯಣ ದುರ್ಗಪ್ಪ ನಾಯ್ಕ ಇವರ ವಾಸ್ತವ್ಯದ ಮನೆ ಬಾರಿ ಮಳೆಗಾಳಿಗೆ ಪೂರ್ತಿ ಕುಸಿದಿದೆ. ಮಾವಳ್ಳಿ ೨ ಗ್ರಾಮದ ಆಚಾರಿಕೇರಿ ಮಜರೆ ನಿವಾಸಿ ಮಂಜುನಾಥ ಮಾದೇವ ಆಚಾರಿ ರವರ ವಾಸ್ತವ್ಯದ ಮನೆಯ ಪಕ್ಕದ ಕೋಣೆಯ ಎದುರಿನ ಮೇಲ್ಚಾವಣಿ ಮೇಲೆ ಮರದ ಕೊಂಬೆ ಗಾಳಿ ಮಳೆಗೆ ಬಿದ್ದು ಹಾನಿಯಾಗಿದೆ. ಯಲ್ವಡಿಕವೂರು ಗ್ರಾಮದ ರಾಜು ನಾಯ್ಕ್ ಇವರ ಮನೆಯ ಮೇಲೆ ಮರ ಬಿದ್ದಿದೆ. ತಲಾನ ಗ್ರಾಮದ ಲಕ್ಷ್ಮಿ ದುರ್ಗಪ್ಪ ನಾಯ್ಕ ಇವರ ವಾಸ್ತವ್ಯದ ಮನೆ ಗೋಡೆ ಕುಸಿದು ಬಿದ್ದು ತೀವ್ರ ಹಾನಿಯಾಗಿದೆ. ಶಿರಾಲಿ ೧ರ ಪಾರ್ವತಿ ದುರ್ಗಪ್ಪ ನಾಯ್ಕ ಇವರ ವಾಸ್ತವ್ಯ ಮನೆಯ ಮೇಲ್ಚಾವಣೆ ಕುಸಿದು ಬಿದ್ದು ಹಾನಿಯಾಗಿದೆ.
ಇದನ್ನೂ ಓದಿ : ಮಾರಿಜಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ ಆಡಳಿತ ಸಮಿತಿ