ಶಿವಮೊಗ್ಗ: ಪ್ರಚೋದನಕಾರಿ ಭಾಷಣ ಆರೋಪ ಹಿನ್ನಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹರ್ಷನ ಕೊಲೆಯ ನಂತರ ಹಿಂದೂಗಳು ಮುಸ್ಲಿಂರ ವಿರುದ್ಧ ಮಾರಿ ಹಬ್ಬದಲ್ಲಿ ಕುರಿಕೊಚ್ಚಿ ಹಾಕಿದ ಹಾಗೆ ಕೊಚ್ಚಬಹುದಿತ್ತು. ಆದರೆ ಹಿಂದೂ ಸಮಾಜ ಆ ರೀತಿ ಪ್ರತಿಕ್ರಿಯಿಸದೆ ಶಾಂತಿ ರೀತಿಯಲ್ಲಿ ನಡೆದುಕೊಂಡಿದೆ. ಇಲ್ಲಿನ ಹಿಂದೂ ಹೆಣ್ಣುಮಕ್ಕಳು ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮಳನ ರಕ್ತ ಹಂಚಿಕೊಂಡು ಬೆಳೆದವರು. ಅಂತಹವರನ್ನ ಕೆಣಕಿದರೆ ಕೆಣಕಿದವರನ್ನ ಕೊಚ್ಚಿ ಹಾಕುತ್ತಾರೆ ಎಂದು ಭಾಷಣದಲ್ಲಿ ಹೇಳಿದ್ದರು.
ಈ ಹಿನ್ನೆಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಐಪಿಸಿ ಸೆಕ್ಷನ್ 153ಎ ಮತ್ತು 504 ಪ್ರಕರಣ ದಾಖಲಾಗಿದೆ.