ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಮಾರಿಜಾತ್ರೆಗಳಲ್ಲಿ ಒಂದಾದ ಭಟ್ಕಳದ ಮಾರಿಜಾತ್ರೆ ಜುಲೈ ೩೧ ಹಾಗೂ ಆಗಸ್ಟ್ ೧ ರಂದು ಅದ್ದೂರಿಯಾಗಿ ನಡೆಯಲಿದೆ. ತಾಲೂಕು ಹಾಗೂ ಜಿಲ್ಲೆಯ ಭಕ್ತಾದಿಗಳು ಭಟ್ಕಳ ಮಾರಿಜಾತ್ರೆಯಲ್ಲಿ ಪಾಲ್ಗೊಂಡು ಮಾರಿಯಮ್ಮನ ಆಶೀರ್ವಾದ ಪಡೆದುಕೊಳ್ಳುವಂತೆ ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ಸೋಮವಾರ ಮಾರಿಕಾಂಬಾ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ಕುರಿತು ಮಾಹಿತಿ ನೀಡಿದರು. ಈಗಾಗಲೇ ಮಾರಿಜಾತ್ರೆಗೆ ಸಕಲ ಸಿದ್ಧತೆಗಳು ನಡೆದಿದೆ. ಜುಲೈ ೨೩ ಮಂಗಳವಾರರಂದು ಮೂರ್ತಿಗೆ ಅವಶ್ಯಕ ಅಮಟೆ ಮರದ ಪೂಜೆ, ಅದರ ಮುಹೂರ್ತಗಳೆಲ್ಲವೂ ನಡೆಯಲಿವೆ. ಮರವನ್ನು ಕತ್ತರಿಸಿ ಅದೇ ಸ್ಥಳದಲ್ಲಿಯೇ ಒಂದು ಮೂರ್ತಿ ಬಿಂಬವನ್ನು ಸಿದ್ಧ ಮಾಡಲಾಗುತ್ತದೆ. ಜುಲೈ ೨೬ ಶುಕ್ರವಾರದಂದು ಸ್ಥಳದಿಂದ ಮಾರಿ ಮೂರ್ತಿ ತಯಾರಿಕಾ ಸ್ಥಳವಾದ ಆಚಾರ್ಯ ಕುಟುಂಬದ ಮಾರಿಗದ್ದುಗೆಗೆ ಕರೆತರಲಾಗುವುದು. ಅಲ್ಲಿಂದ ಜುಲೈ ೩೦ರ ತನಕ ಮಾರಿಮೂರ್ತಿಯ ಕೆತ್ತನೆಯ ಕೆಲಸಗಳು ಮುಂದುವರೆಯಲಿವೆ. ತದನಂತರದಲ್ಲಿ ರಾತ್ರಿ ನಡೆಯಲಿರುವ ಸುಹಾಸಿನಿ ಪೂಜೆಯ ಬಳಿಕ ೩೧ರ ಮುಂಜಾನೆ ಮಾರಿಕಾಂಬಾ ದೇವಸ್ಥಾನದ ಗದ್ದುಗೆಗೆ ಮಾರಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆ ತಂದು ಪೂಜೆಸಲಿದ್ದೇವೆ. ೨ ದಿನಗಳ ಕಾಲ ಜಾತ್ರೆ ನಡೆಯಲಿದೆ. ಆಗಸ್ಟ್ ೨ ರಂದು ಸಂಜೆ ೪.೩೦ಕ್ಕೆ ಮಾರಿ ದೇವಿಗೆ ವಿಸರ್ಜನಾ ಪೂಜೆ ನೆರವೇರಿಸಲಾಗುವುದು. ಭಕ್ತರು ತಲೆ ಮೇಲೆ ದೇವಿ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುವರು. ಜಾಲಿಕೋಡಿ ಸಮುದ್ರದಲ್ಲಿ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಮಾರಿ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.
ಇದನ್ನೂ ಓದಿ : ಭಟ್ಕಳ ಮಾರಿಜಾತ್ರೆ ಜುಲೈ ೩೧ರಿಂದ ಆರಂಭ
ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ
ಪ್ರಧಾನ ಕಾರ್ಯದರ್ಶಿ ಶ್ರೀಧರ ಬಿ. ನಾಯ್ಕ ಮಾತನಾಡಿ, ಅನಾದಿ ಕಾಲದಿಂದ ನಡೆದು ಬಂದ ಪದ್ಧತಿಯಂತೆ ಈ ವರ್ಷವೂ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ನಿಗದಿತ ದಿನದ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆಗಳಾಗಿವೆ. ಮಾರಿ ದೇವಿಯ ದರ್ಶನಕ್ಕೆ ಬರುವಂತಹ ಭಕ್ತರಿಗೆ ದೇವಿಯ ದರ್ಶನ, ಪೂಜಾ ಕೈಂಕರ್ಯಕ್ಕೆ ಹಾಗೂ ಭಕ್ತರ ಹರಕೆ ಸೇವೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಎರಡು ದಿನಗಳ ಕಾಲ ನಡೆಯಲಿರುವ ಜಾತ್ರೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾರಿಜಾತ್ರೆಯಲ್ಲಿ ಪಾಲ್ಗೊಂಡು ಮಾರಿ ದೇವಿಯ ದರ್ಶನ ಪಡೆದುಕೊಳ್ಳುವಂತೆ ಕೋರಿಕೊಂಡರು.
ಇದನ್ನೂ ಓದಿ : ಚರಂಡಿ ಬಿಟ್ಟು ರಸ್ತೆ ಮೇಲೆ ಹರಿಯುವ ನೀರು !
ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಸದಸ್ಯರಾದ ನಾರಾಯಣ ಖಾರ್ವಿ, ಮಹಾದೇವ ಮೊಗೇರ, ಶಂಕರ ಶೆಟ್ಟಿ, ಸುರೇಂದ್ರ ಭಟ್ಕಳಕರ, ಶ್ರೀಪಾದ ಕಂಚುಗಾರ, ಸುರೇಶ ಆಚಾರ್ಯ, ವಾಮನ ಶಿರಸಾಟ ಉಪಸ್ಥಿತರಿದ್ದರು.
ಇದನ್ನೂ ಓದಿ : ಲೋಕ ಕಲ್ಯಾಣಕ್ಕಾಗಿ ಚಾತುರ್ಮಾಸ್ಯ : ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ