ಹೊನ್ನಾವರ : ಶರಾವತಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೀನುಗಾರ ಮೃತಪಟ್ಟ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಉದ್ಯಮನಗರದ ನಿವಾಸಿ ಕೃಷ್ಣ ಮಂಜುನಾಥ ಮೇಸ್ತ( ೫೦ ) ಮೃತ ದುರ್ದೈವಿ. ಇವರು ನಿನ್ನೆ(ಜುಲೈ ೧೧) ಬೆಳಿಗ್ಗೆ ೬ ಗಂಟೆಗೆ ಮೀನು ಹಿಡಿಯಲು
ಮನೆಯ ಹತ್ತಿರದ ಶರಾವತಿ ನದಿಯಲ್ಲಿ ಹೋಗಿದ್ದರು. ಮಧ್ಯಾಹ್ನ ೧ ಗಂಟೆ ನಡುವಿನ ಅವಧಿಯಲ್ಲಿ
ಉದ್ಯಮನಗರದ ಶರಾವತಿ ನದಿಯ ನೀರಿನಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ
ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಭಟ್ಕಳದ ವಾಕರಸಾ ಸಂಸ್ಥೆಯ ಮೆಕ್ಯಾನಿಕ್ ಕುಮಟಾದಲ್ಲಿ ಸಾವು
ದೂರಿನಲ್ಲಿ ಏನಿದೆ?
ಘಟನೆಗೆ ಸಂಬಂಧಿಸಿ ಮೃತರ ಸಹೋದರಿಯ ಪತಿ ಉಮೇಶ ಲಕ್ಷ್ಮಣ ತಾಂಡೇಲ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ ಮೃತ ಕೃಷ್ಣ ಮೇಸ್ತ ಅವರು ಉದ್ಯಮನಗರದಲ್ಲಿ ಇರುವಉಮೇಶ ಅವರ ಮನೆಯಲ್ಲಿಯೇ ವಾಸಿಸುತ್ತಿದ್ದರು. ಮೃತನ ಪತ್ನಿ ಮತ್ತು ಮಗಳು ಉಡುಪಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಳೆಗಾಲವಾದ್ದರಿಂದ ಕೃಷ್ಣ ಮೇಸ್ತ ಅವರು ದೋಣಿಯಲ್ಲಿ ಮೀನುಗಾರಿಕೆಗೆ ಹೋಗುತ್ತಿರಲಿಲ್ಲ. ಪ್ರತಿದಿವಸ ಬೆಳಿಗ್ಗೆ ಮನೆಯ ಹತ್ತಿರ ಇರುವ ಶರಾವತಿ ನದಿಯ ನೀರಿನಲ್ಲಿ ಬಲೆ ಹಾಕಿ ಮೀನು ಹಿಡಿದು ಜೀವನ ನಡೆಸುತ್ತಿದ್ದರು.ಗುರುವಾರ ಬೆಳಿಗ್ಗೆ ೬ ಗಂಟೆ ಸುಮಾರಿಗೆ ಮೀನು ಹಿಡಿಯಲು ಮನೆ ಹತ್ತಿರದ ಶರಾವತಿ ನದಿ ಹೋಗುವುದಾಗಿ ಹೇಳಿ ಹೋಗಿದ್ದರು. ಹೋಗುವಾಗ ಮೀನು ಹಿಡಿಯುವ ಬಲೆ ತೆಗೆದುಕೊಂಡು ಹೋಗಿದ್ದರು. ಮಧ್ಯಾಹ್ನ ೧ ಗಂಟೆ ಸುಮಾರಿಗೆ ಕೃಷ್ಣ ಅವರ ಮೃತದೇಹ ನದಿಯಲ್ಲಿ ತೇಲುತ್ತಿರುವುದನ್ನು ನೋಡಿದ್ದಾರೆ. ಈ ಬಗ್ಗೆ ಸ್ಥಳೀಯರು ಉಮೇಶ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದಾಗ, ಬಾವ ಅದಾಗಲೇ ಸಾವನ್ನಪ್ಪಿದ್ದರು. ಕಾಲಿಗೆ ಮೀನು ಹಿಡಿಯುವ ಬಲೆ ಸುತ್ತಿಕೊಂಡಿತ್ತು ಎಂದು ಉಮೇಶ ದೂರಿನಲ್ಲಿ ತಿಳಿಸಿದ್ದಾರೆ.