ಭಟ್ಕಳ: ಭಾರತ ಪ್ರವಾಸಕ್ಕೆಂದು ಬಂದಿದ್ದ ರಷ್ಯಾದ ಪ್ರಜೆಯೋರ್ವರು ಮುರ್ಡೇಶ್ವರದ ಕಡಲ ತೀರದಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆ ಸೇರಿದರೂ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ : ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವು
ರಷ್ಯಾ ದೇಶದ ಅಲೆಗ್ಸಾಂಡರ್ ತನೆಗಾ( ೭೧) ಮೃತ ಪಟ್ಟ ವ್ಯಕ್ತಿ. ಇವರು ರಷ್ಯಾ ದೇಶದಿಂದ ತಂಡವನ್ನು ಕಟ್ಟಿಕೊಂಡು ಗೋವಾ ರಾಜ್ಯಕ್ಕೆ ಬಂದಿಳಿದಿದ್ದರು. ಗೋವಾದ ಪ್ರದೇಶಗಳನ್ನು ಸುತ್ತಾಡಿ ಗುರುವಾರ ಮುರ್ಡೇಶ್ವರಕ್ಕೆ ಬಂದಿದ್ದರು.

ಈ ವಿಡಿಯೋ ನೋಡಿ : ನಾಗಮಾಸ್ತಿ ದೇವರ ಪುನರ್ ಪ್ರತಿಷ್ಠೆ   https://fb.watch/qnYHqkT70c/?mibextid=Nif5oz

ಮುರುಡೇಶ್ದೇವರ ದೇವಸ್ಥಾನದ ಬಳಿಯಲ್ಲಿ ತೆರಳುವಾಗ ಇವರು ಹಠಾತನೆ ಕುಸಿದು ಬಿದ್ದಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡದ ಬಳಿಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ನೀಡಿದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.