ಭಟ್ಕಳ: ತಾಲೂಕಿನ ಹೆರಾಳಿಯ ವನದುರ್ಗಾ ದೇವಸ್ಥಾನದ ವರ್ಧಂತ್ಯುತ್ಸವದ ಅಂಗವಾಗಿ ಏ.೨ರ ಮಂಗಳವಾರದಂದು ರಾತ್ರಿ ೭ ಗಂಟೆಯಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ “ಕೃಷ್ಣಾರ್ಜುನ’ ನಡೆಯಲಿದೆ.
ಇದನ್ನೂ ಓದಿ : ಏಪ್ರಿಲ್ ೧೦ರಿಂದ 15ರೊಳಗೆ ದ್ವಿತೀಯ ಪಿಯು ಫಲಿತಾಂಶ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ ಗೋಳಿಕುಂಬ್ರಿ ಹಾಗೂ ಅತಿಥಿ ಕಲಾವಿದರು ಯಕ್ಷಗಾನ ಆಖ್ಯಾನವನ್ನು ನಡೆಸಿಕೊಡಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು, ಮೃದಂಗದಲ್ಲಿ ನಾಗರಾಜ ಭಂಡಾರಿ ಹಿರೇಬೈಲ್, ಚಂಡೆಯಲ್ಲಿ ಗಜಾನನ ಸಾಂತೋರು ಇರಲಿದ್ದಾರೆ. ಮುಮ್ಮೇಳದಲ್ಲಿ ಕೃಷ್ಣನಾಗಿ ಈಶ್ವರ ನಾಯ್ಕ ಮಂಕಿ, ಅರ್ಜುನನಾಗಿ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಸುಭದ್ರಳಾಗಿ ಶಂಕರ ಹೆಗಡೆ ನೀಲ್ನೋಡು, ಅಭಿಮನ್ಯುವಾಗಿ ಕಾರ್ತಿಕ ಕಣ್ಣಿ, ಧಾರುಕನಾಗಿ ಜಯರಾಮ ಶೆಟ್ಟಿ ಹಳ್ಳಾಡಿ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಯೋರ್ವರು ನಾರದ ಹಾಗೂ ಭೀಮನ ಪಾತ್ರವನ್ನು ಮಾಡಲಿದ್ದು, ಯಕ್ಷಪ್ರಿಯರಿಗೋಸ್ಕರ ಗೌಪ್ಯವಾಗಿಡಲಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸಂಪೂರ್ಣ ವೇಷ ಭೂಷಣದ ಸಹಕಾರವನ್ನು ಲಕ್ಷ್ಮಣ ನಾಯ್ಕ ಮಂಕಿ ನೀಡಿದರೆ, ಪ್ರಜ್ವಲ್ ವೆಂಕಟರಮಣ ನಾಯ್ಕ ಸಹಕರಿಸಲಿದ್ದಾರೆ. ಯಕ್ಷಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಕ್ಷಗಾನ ಪ್ರದರ್ಶನ ಯಶಸ್ವಿಗೊಳಿಸುವಂತೆ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.