ಭಟ್ಕಳ : ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆ ತಾಲೂಕಿನ ಚಿತ್ರಾಪುರದಲ್ಲಿ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅಗಸ್ತ್ಯ ಉಮೇಶ ದೇವಾಡಿಗ (೮) ಗಾಯಗೊಂಡ ಬಾಲಕ. ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಚಿತ್ರಾಪುರ ಕಡೆಯಿಂದ ಶಿರಾಲಿ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಚಿತ್ರಾಪುರ ಅಂಚೆ ಕಚೇರಿ ಬಳಿ ಈ ಅಪಘಾತ ಸಂಭವಿಸಿದೆ. ಬಾಲಕನ ಎಡ ತೊಡೆಯ ಹತ್ತಿರ, ಎಡಕೈ ಮತ್ತು ಬಲಕೈಗೆ ಗಾಯಗಳಾಗಿವೆ.
ಇದನ್ನೂ ಓದಿ : ಅಳ್ವೆಕೋಡಿಯಲ್ಲಿ ಇಂದು ಲಕ್ಷ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ
ಬೈಕ್ ಸವಾರ ಶಿರಾಲಿ ಕೋಟೆಬಾಗಿಲ ನಿವಾಸಿ ಗಣಪತಿ ಜಟ್ಟ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಕನ ಸೋದರಮಾವ ಶಿರಾಲಿ ಮಾವಿನಕಟ್ಟೆ ನಿವಾಸಿ ಕುಪ್ಪ ಶನಿಯಾರ ದೇವಡಿಗ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.