ಭಟ್ಕಳ : ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ರಾಜಾಂಗಣ ಮುಖ್ಯ ರಸ್ತೆಯಲ್ಲಿರುವ ಶ್ರೀ ನಾಗಬನ ದೇವರುಗಳಾದ ಶ್ರೀ ನಾಗ ಮತ್ತು ಜೈನ ನಾಗಯಕ್ಷೆ ದೇವರುಗಳ ಪುನರ್ ಪ್ರತಿಷ್ಠೆ ಆದ ಪ್ರಥಮ ವರ್ಷದ ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವ ಫೆ.೨೯ರಂದು ಜರುಗಲಿದೆ.
ಇದನ್ನೂ ಓದಿ : ಶ್ರೀ ಕ್ಷೇತ್ರ ಮುರ್ಡೇಶ್ವರದಲ್ಲಿ ಮಹಾ ಶಿವರಾತ್ರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ
ಅಂದು ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ ೧ರಿಂದ ೩ರವರೆಗೆ ಮಹಾ ಅನ್ನಸಂತರ್ಪಣೆ ನೆರವೇರಲಿದೆ.
ಅತ್ಯಂತ ಪುಣ್ಯಕಾರ್ಯವಾದ ಅನ್ನಸಂತರ್ಪಣೆಗೆ ನಗದು ಮತ್ತು ವಸ್ತು ರೂಪದಲ್ಲಿ ದೇಣಿಗೆ ನೀಡಬಹುದಾಗಿದೆ. ಹೊರೆಕಾಣಿಕೆ ಸಲ್ಲಿಸುವವರು ಫೆ.೨೮ರ ಬುಧವಾರ ಸಂಜೆ ೫ರೊಳಗಾಗಿ ಸನಿಹದ ಶ್ರೀ ಕರಿಬಂಟ ದೇವಸ್ಥಾನಕ್ಕೆ ತಂದು ಮುಟ್ಟಿಸಬಹುದಾಗಿದೆ. ಧನಸಹಾಯ ಮಾಡುವವರು ಯುನಿಯನ್ ಬ್ಯಾಂಕ್ ನ ರಾಜಾಂಗಣ ನಾಗಬನ ಅಭಿವೃದ್ಧಿ ಸಮಿತಿಯ ಖಾತೆಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಜಮಾ ಮಾಡಬಹುದಾಗಿದೆ.
ಕ್ಷೇತ್ರ ಹಿನ್ನೆಲೆ
ಈ ಕ್ಷೇತ್ರಪಾಲವು ಸುಮಾರು 500 ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ. ಕಾಲಾನಂತರದಲ್ಲಿ ಕ್ಷೇತ್ರದ ವೈಭವವನ್ನೇ ಕಳೆದುಕೊಂಡಂತಾಗಿತ್ತು.
ತದನಂತರ ಕ್ಷೇತ್ರದ ಗತಸ್ಥಿತಿಯನ್ನು ನೋಡಿ ಭಕ್ತರು ಶ್ರೀ ರಾಜಾಂಗಣ ನಾಗಬನ ಅಭಿವೃದ್ಧಿ ಸಮಿತಿ ರಚಿಸಿ ಜೀರ್ಣೋದ್ಧಾರಕ್ಕೆ ಮುನ್ನುಡಿ ಬರೆದರು. ಶ್ರೀ ಕ್ಷೇತ್ರದ ಕಳೆ ಬರಹಗಳನ್ನು ಕಲೆಹಾಕಿ ಶ್ರೀ ಕ್ಷೇತ್ರಕ್ಕೆ ಕಳೆ ಕೊಟ್ಟು ಶ್ರೀ ದೇವರುಗಳ ಪುನರ್ ಪ್ರತಿಷ್ಠೆ ಮಾಡಲಾಗಿದೆ.
ಈ ವಿಡಿಯೋ ನೋಡಿ : ಸರ್ಕಾರಿ ಶಾಲೆಯಲ್ಲಿ ಇಕೋ ಪಾರ್ಕ್ https://www.facebook.com/share/v/56wqm56LKEFzrnsb/?mibextid=oFDknk