ಭಟ್ಕಳ: ಇಲ್ಲಿನ ಅನಿವಾಸಿ ಭಾರತೀಯರ ಸಂಘಟನೆ ರಾಬಿತಾ ಸೊಸೈಟಿ ವತಿಯಿಂದ ಪ್ರತಿ ವರ್ಷ ನೀಡಲ್ಪಡುವ ರಾಬಿತಾ ಬೆಸ್ಟ್ ಸ್ಕೂಲ್ ಅವಾರ್ಡ್ ಪುರಸ್ಕಾರವನ್ನು ನಗರದ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಪಡೆದುಕೊಂಡಿದೆ. ಅಲಿ ಪಬ್ಲಿಕ್ ಸ್ಕೂಲ್ ನ ವಿಜ್ಞಾನ ಶಿಕ್ಷಕಿ ರಿಫತ್ ಕೋಬಟ್ಟೆಗೆ ರಾಬಿತಾ ಬೆಸ್ಟ್ ಟೀಚರ್ ಅವಾಡ್ ಲಭಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬುಧವಾರ ಸಂಜೆ ಅಂಜುಮನಾಬಾದ್ ಮೈದಾನದಲ್ಲಿ ನಡೆದ ರಾಬಿತಾ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಸಮಾರೋಪ ಸಮಾರಂಭದಲ್ಲಿ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಮಾಜಿ ವಕ್ತಾರ, ಖ್ಯಾತ ವಿದ್ವಾಂಸ ಮೌಲಾನಾ ಖಲಿಲುರ‍್ರಹ್ಮಾನ್ ಸಜ್ಜಾದ್ ನೋಮಾನಿ ಪ್ರಶಸ್ತಿಗಳನ್ನು ವಿತರಿಸಿದರು.

ಇದನ್ನೂ ಓದಿ : ಮೃತರ ಕುಟುಂಬಕ್ಕೆ ೫ ಲಕ್ಷ, ಮನೆ ಹಾನಿಗೆ ೧.೨೫ ಲಕ್ಷ ರೂ. ಪರಿಹಾರ

ನಂತರ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಪಡೆದವರು ಹೆಚ್ಚಾದಂತೆ ನಮ್ಮ ಸಮಾಜ ಹಾಳಾಗುತ್ತಿದೆ. ಇದರ ಕುರಿತು ಶಿಕ್ಷಣ ಸಂಸ್ಥೆಯ ಮುಖಂಡರು, ಶಿಕ್ಷಕರು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯ ಹೊಣೆಗಾರರು ಕೇವಲ ಶಾಲಾ ಕಟ್ಟಡ ಮತ್ತು ಸಂಪನ್ಮೂಲವನ್ನು ಕ್ರೂಢಿಕರಿಸುವುದರಲ್ಲೇ ತಮ್ಮ ಗಮನ ಕೇಂದ್ರೀಕರಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದರ ಕಡೆಗೂ ಗಮನ ಹರಿಸಬೇಕಾಗಿದೆ ಎಂದರು.

ಇದನ್ನೂ ಓದಿ : ಆಷಾಢ ಏಕಾದಶಿ ನಿಮಿತ್ತ ಲಕ್ಷ ತುಳಸಿ ಅರ್ಚನೆ

ರಾಬಿತಾ ಸಂಸ್ಥೆಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಅತಿಕುರ‍್ರಹ್ಮಾನ್ ಮುನೀರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಬಿತಾ ಸಂಸ್ಥೆಯ ಚಟುವಟಿಕೆಗಳನ್ನು ಪರಿಚಯಿಸಿದರು.

ಇದನ್ನೂ ಓದಿ : ಹೆರಾಡಿ ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯೂನೂಸ್ ಕಾಜಿಯಾ, ಜಮಾತುಲ್ ಮುಸ್ಲಿಮ್ ಪ್ರಧಾನ ಕಾಝಿ ಮೌಲಾನಾ ಅಬ್ದುಲ್ ರಬ್ ನದ್ವಿ, ಮರ್ಕಝೀ ಜಮಾತ್ ಪ್ರಧಾನ ಕಾರ್ಯದರ್ಶಿ ಮೌಲಾನ ಕ್ವಾಜಾ ಅಕ್ರಮಿ ಮದಿನಿ ನದ್ವಿ, ಮುಸ್ಲಿಮ್ ಕಮ್ಯುನಿಟಿ ಜಿದ್ದಾ ಇದರ ಅಧ್ಯಕ್ಷ ಖಮರ್ ಸಾದಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ರಾಬಿತಾ ಎಜ್ಯುಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭ