ಭಟ್ಕಳ: ಭಟ್ಕಳದ ರಾಬಿತಾ ಸೂಸೈಟಿ ಆಯೋಜಿಸಿದ್ದ “ರಾಬಿತಾ ಎಜ್ಯುಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ರಾಬಿತಾ ಎಜ್ಯುಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭದ ಮೊದಲ ಅಧಿವೇಶನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿ ಖ್ಯಾತ ಇಸ್ಲಾಮಿ ವಿದ್ವಾಂಸ ಅಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇದರ ಮಾಜಿ ವಕ್ತಾರ ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನೋಮಾನಿ ಮಾತನಾಡಿದರು.
ಇದನ್ನೂ ಓದಿ : ಅತಿವೃಷ್ಟಿ ಹಿನ್ನೆಲೆ ಉಸ್ತುವಾರಿ ಸಚಿವರಿಂದ ಪರಿಶೀಲನಾ ಸಭೆ
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಪಾಠಗಳನ್ನು ಮಾಡಲಾಗುತ್ತಿದೆ ಕಲಿಸಲಾಗುತ್ತಿಲ್ಲ. ಓದುವುದರಲ್ಲಿ ಮತ್ತು ಕಲಿಯುವುದರಲ್ಲಿ ಬಹಳ ವ್ಯತ್ಯಾಸ ಇದೆ. ನಮ್ಮ ಪೂರ್ವಜರು ಓದು ಬರಹದಿಂದ ದೂರವಿದ್ದರು. ಆದರೆ ಅವರು ಯಾವುದೇ ವಿದ್ವಾಂಸರಿಗಿಂತ ಕಡಿಮೆ ಇರಲಿಲ್ಲ. ಇಂದು ಓದು ಎಂಬುದರ ಅರ್ಥ ಬದಲಾಗಿದೆ. ಪ್ರಸ್ತುತ ಓದು ಬರೆಹ ಬಲ್ಲವರು ಹಾಗೂ ಶಿಕ್ಷಣ ಪಡೆದವರ ಸಂಖ್ಯೆ ಮಾನವ ಇತಿಹಾಸದಲ್ಲೇ ಇಷ್ಟೊಂದು ಹೆಚ್ಚು ಇರಲಿಲ್ಲ. ಆದರೆ ಈಗಿರುವಷ್ಟು ಒದು ಬರಹ ಬಲ್ಲ ಶಿಕ್ಷಿತ ಅಜ್ಞಾನಿಗಳೂ ಮಾನವ ಇತಿಹಾಸದಲ್ಲಿ ಎಂದೂ ಕೂಡ ಕಾಣಲಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ : ರಾಜಾರೋಷವಾಗಿ ಟೋಲ್ ನಲ್ಲಿ ಹಣ ವಸೂಲಿ ಮಾಡುತ್ತೀರಾ…?
ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರವನ್ನು ನಡೆಸುತ್ತಿರುವವರು ಅಶಿಕ್ಷಿಕತರಲ್ಲ. ಬದಲಾಗಿ ಶಿಕ್ಷಣವಂತ ಅಜ್ಞಾನಿಗಳೇ ಆಗಿದ್ದಾರೆ. ಹೊಸ ಹೊಸ ಸ್ಲ್ಯಾಮ್ ಮಾಡುವವರೂ ಶಿಕ್ಷಣ ಪಡೆದವರೇ ಆಗಿದ್ದಾರೆ. ಯಾರು ತನ್ನಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡಿದ್ದಾರೋ ಅವರೇ ನಿಜವಾಗಿ ಶಿಕ್ಷಣವಂತರಾಗಿದ್ದಾರೆ ಎಂದರು.
ಇದನ್ನೂ ಓದಿ : ನಿಯಂತ್ರಣ ತಪ್ಪಿ ಗಟಾರಕ್ಕೆ ಇಳಿದ ಬಸ್
ದೇಶದ ಎಂಬತ್ತು ಕೋಟಿ ಮನುಷ್ಯರು ೫ ಕೆ.ಜಿ ಅಕ್ಕಿಯ ಆಸರೆಯಲ್ಲಿ ಬದುಕುತ್ತಿದ್ದಾರೆ. ನಮ್ಮ ಯುವಕರು ಮಾಹಿತಿ ತಂತ್ರಜ್ಞಾನದ ಜಾಲದೊಳಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಾವು ವಿಶ್ವಗುರು ಎಂದು ಹೇಳಿಕೊಳ್ಳುತ್ತಿದ್ದೇವೆ. ನಮಗೆ ನಾಚಿಕೆಯಾಗಬೇಡವೇ? ಎಂದು ಅವರು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಮರ್ಕಝಿ ಜಮಾತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನಾ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ ಮಾತನಾಡಿದರು.
ರಾಬಿತಾ ಸೂಸೈಟಿಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ : ನಿಯಂತ್ರಣ ತಪ್ಪಿ ಗಟಾರಕ್ಕೆ ಇಳಿದ ಬಸ್
ವೇದಿಕೆಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಯುನೂಸ್ ಕಾಝಿಯಾ, ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಜಮಾತುಲ್ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಹುಸೇನ್ ಜುಕಾಕೋ, ಜಾಮಿಯ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೌಲಾನಾ ತಲ್ಹಾ ನದ್ವಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ, ಭಟ್ಕಳ ಮುಸ್ಲಿಮ್ ಜಮಾತ್ ದುಬೈ ಇದರ ಪ್ರಧಾನ ಕಾರ್ಯದರ್ಶಿ ಜೈಲಾನಿ ಮೊಹತೆಶಮ್ ಉಪಸ್ಥಿತರಿದ್ದರು.
ಮಹಿಳಾ ವೇದಿಕೆಯಲ್ಲಿ ನ್ಯೂ ಶಮ್ಸ್ ಸ್ಕೂಲ್ ನ ಫಹಮಿದಾ ಖಿಜರ್ ಹಾಗೂ ರೋಷನ್ ಮಾಲಿಕಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರಧಾನ ಮಾಡಿದರು.
ಇದನ್ನೂ ಓದಿ : ಐ.ಆರ್.ಬಿ. ಕಂಪನಿ ವಿರುದ್ಧ ಪ್ರಕರಣ ದಾಖಲು : ಮಂಕಾಳ ವೈದ್ಯ
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೩೫ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಡಾ.ಅತಿಕುರ್ರಹ್ಮಾನ್ ಮುನಿರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತನ್ವೀರ್ ಜುಷದಿ ನದ್ವಿ, ಅಥರ್ ಪಿರ್ಝಾದೆ ಕಾರ್ಯಕ್ರಮ ನಿರೂಪಿಸಿದರು.